Belagavi NewsBelgaum NewsCrimeKannada NewsKarnataka NewsLatestNational
*ಡಿವೈಡರ್ ಗೆ ಬೈಕ್ ಡಿಕ್ಕಿ: ಯುವಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅತೀ ವೇಗವಾಗಿ ಬೈಕ್ ಚಾಲಾಯಿಸಿದ ಯುವಕ ಡಿವೈಡರ್ ಗೆ ಗುದ್ದಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬಾಬು ಖರಾತ ಎಂಬ ಯುವಕ, ಬೆಳಗಾವಿ-ಪಣಜಿ ರಸ್ತೆಯಲ್ಲಿ ಲೋಂಡಾ ಕಡೆಯಿಂದ ಖಾನಾಪೂರ ಕಡೆಗೆ ಅತೀ ವೇಗವಾಗಿ ಬೈಕ್ ಓಡಿಸಿಕೊಂಡು ಹೋಗುವಾಗ ಖಾನಾಪೂರ ತಾಲೂಕಿನ ಮೋಹಿಶೇತ ಗ್ರಾಮದ ರೈಲ್ವೇ ಗೇಟ್ ಬಳಿ ರಾತ್ರಿ ವೇಳೆ ಕಾಮಗಾರಿಯ ಸಲುವಾಗಿ ರಸ್ತೆಗೆ ಅಳವಡಿಸಿದ್ದ ಸಿಮೆಂಟ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ತಲೆ, ಮುಖ ಹಾಗೂ ಎಡಗೈ ಮತ್ತು ಎಡಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.



