*ಜೆಡಿಎಸ್ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಪ್ರಕರಣ: ಪಿಎಸ್ಐ ಅಮಾನತ್ತು*

ಪ್ರಗತಿವಾಹಿನಿ ಸುದ್ದಿ: ಕಾರವಾರದ ಜೆಡಿಎಸ್ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಎಸ್ಐ ಅಮಾನುತ್ತು ಆಗಿದ್ದಾರೆ.
ಜೆಡಿಎಸ್ ಮುಖಂಡೆಯೊಬ್ಬರ ಪುತ್ರ ಚಿರಾಗ್ ಎಂಬಾತ ಪ್ರೀತಿ ಹೆಸರಲ್ಲಿ ದಿನನಿತ್ಯ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ರಿಶೇಲ್ ಡಿಸೋಜಾ ಜ.9 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಕುರಿತು ಮೃತ ರಿಶೇಲ್ ಡಿಸೋಜಾ ತಂದೆ ಕ್ರಿಸ್ತೋದ್ ಡಿಸೋಜಾ ಕಾರವಾರ ತಾಲೂಕಿನ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಜೆಡಿಎಸ್ ನಾಯಕಿಯ ಪುತ್ರ ಚಿರಾಗ್ ಎಂಬಾತನನ್ನು ಬಂಧಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಇಲಾಖೆ ಕದ್ರಾ ಠಾಣೆ ಪಿಎಸ್ಐ ಸುನೀಲ್ ಎಂಬವರನ್ನು ಅಮಾನತು ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುರು ದಾಖಲಾದ ಮರುದಿನವೇ ಸಿಪಿಐಗೆ ಕೇಸ್ ಹಸ್ತಾಂತರವಾಗಿತ್ತು. ಆದರೆ ಇದೀಗ ಆರೋಪಿ ಚಿರಾಗ್ ನನ್ನ ಬಂದಿಸುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಹಲವು ಪ್ರಭಾವಿ ರಾಜಕಾರಣಿಗಳ, ಸಂಘ ಸಂಸ್ಥೆಗಳಿಂದ ಒತ್ತಡ ಕೂಡ ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿನ್ನಲೆ ನೇರವಾಗಿ ಪಿಎಸ್ಐ ಸುನೀಲ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಪೋಲಿಸ್ ಇಲಾಖೆ ಆದೇಶ ಹೊರಡಿಸಿದೆ.




