
ಪ್ರಗತಿವಾಹಿನಿ ಸುದ್ದಿ: ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ರಾಜ್ಯಪಾಲರು ವಿಧಾನಮಂಡಲ ಧಿವೇಶನದಿಂದಲೇ ಹೊರ ನಡೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡು ವಿಧಾನಸಭಾ ಅಧಿವೇಶನ ಇಂದಿನಿಂದ ಆರಂಭವಾಗಿದೆ. ರಾಷ್ಟ್ರಗೀತೆಗೆ ಅವಮಾನಿಸಲಾಗಿದೆ ಎಂದು ರಾಜ್ಯಪಾಲ ಆರ್.ಎನ್.ರವಿ ವಿಧಾನಸಭೆಯಲ್ಲಿ ಭಾಷಣ ಮಾಡದೇ ಹೊರ ನಡೆದ ಘಟನೆ ನಡೆದಿದೆ.
ತಮಿಳುನಾಡಿನ ವಿಧಾನಸಭೆಯಲ್ಲಿ ರಾಜ್ಯಪಾಲರು ಈ ರೀತಿ ಭಾಷಣ ಮಾಡದೇ ಹೊರ ನಡೆದ ಘಟನೆ ಸತತ ಮೂರನೇ ವರ್ಷವಾಗಿದೆ. ಇಂದು ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಎಂ.ಕೆ.ಸ್ಟಾಲಿನ್, ರಾಜ್ಯಪಾಲರು ಸದನಕ್ಕೆ ಅಗೌರವ ತೋರಿದ್ದಾರೆ. ಸದನದ ಶಿಷ್ಟಾಚಾರದ ವಿರುದ್ಧವಾಗಿ ರಾಜ್ಯಪಾಲರು ವರ್ತಿಸಿದ್ದು, ಅಗೌರವ ಉಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯಪಾಲರು ಅಧಿವೇಶನದಿಂದ ಹೊರ ನಡೆಯುತ್ತಿದ್ದಂತೆ ವಿಪಕ್ಷ ಎಐಎಡಿಎಂಕೆ ಸದಸ್ಯರು ಕೂಡ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿ ಸದನದಿಂದ ಹೊರ ನಡೆದ ಪ್ರಸಂಗವೂ ನಡೆದಿದೆ.




