ಫೆಬ್ರವರಿ 26ರಿಂದ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫೆ.26ರಿಂದ 12 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಲಾಂಛನವನ್ನ ಸಿಎಂ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದರು.

ಫೆಬ್ರವರಿ 26 ರಿಂದ ಮಾರ್ಚ್ 4 ವರೆಗೆ ಬೆಂಗಳೂರಿನಲ್ಲಿ ಅಂತ್ರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಫೆಬ್ರವರಿ 26 ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಿಎಂ ಯಡಿಯೂರಪ್ಪ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ, ಚಲನಚಿತ್ರ ವಾಣಿಜ್ಯ ಮಂಡಳಿಗಳು ಈ ಬಾರಿಯ ಚಲನಚಿತ್ರೋತ್ಸವಕ್ಕೆ ಕೈಜೋಡಿಸಿವೆ. ರಾಜಾಜಿನಗರದ ಓರಿಯನ್ ಮಾಲ್ ನ 11 ಪರದೆಯಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಏಳು ದಿನಗಳ ಚಿತ್ರೋತ್ಸವದಲ್ಲಿ ಒಟ್ಟು 14 ವಿಭಾಗಗಳಿದ್ದು, ಚಿತ್ರೋದ್ಯಮದ ಎಲ್ಲಾ ವಿಭಾಗಗಳನ್ನು ಪ್ರತಿನಿಧಿಸಲಿದೆ. ವಿಶ್ವ ಸಿನಿಮಾ, ಚಿತ್ರಭಾರತಿ, ಕಣ್ಮರೆಯಾದ ನಟ-ನಟಿಯರು, ನಿರ್ದೇಶಕರ ಸ್ಮರಣೆ, ಸಾಕ್ಷ್ಯಚಿತ್ರಗಳು ಇಲ್ಲಿ ಚಿತ್ರಲೋಕದ ವೈವಿಧ್ಯವನ್ನು ತೆರೆದಿಡಲಿದೆ. ಸಂವಾದ, ಉಪನ್ಯಾಸ, ಕಾರ್ಯಾಗಾರ ಕಾರ್ಯಕ್ರಮಗಳು ನಡೆಯಲಿವೆ.

50 ದೇಶಗಳ 200 ಚಿತ್ರಗಳು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವಕ್ಕೆ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಸಾಮಾನ್ಯ ಜನರಿಗೆ 800 ರೂ ಮತ್ತು ಚಿತ್ರತಂಡದವರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ 400 ಶುಲ್ಕ ನಿಗದಿ ಮಾಡಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button