
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ಪಟ್ಟಣದ ರಾಮನಗರದ ಮಹಾರಾಣಾ ಪ್ರತಾಪ್ ಚೌಕ್ ಹತ್ತಿರ ಗಾಂಜಾ ಮಾರುತ್ತಿದ್ದ ಮಹಿಳೆ ಹಾಗೂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ವಂದನಾ ರಾಜು ಹೊಸಮನಿ (50) ಎಂಬ ಮಹಿಳೆ ಗಾಂಜಾ ಪ್ಯಾಕೇಟಗಳನ್ನು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಚಿಕ್ಕೋಡಿ ಪೊಲೀಸರು, 15000 ಮೌಲ್ಯಸ 165 ಗ್ರಾಂ ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಚಿಕ್ಕೋಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 28/2026 ಕಲಂ 20(b) (ii) (A) NDPS ACT ಪ್ರಕರಣ ದಾಖಲಿಸಲಾಗಿದೆ.
ಆರೋಪಿ ವಂದನಾ ರಾಜು ಹೊಸಮನಿಗೆ ಗಾಂಜಾ ಪೂರೈಸಿದ ವ್ಯಕ್ತಿಗಳ ಹಾಗೂ ಇನ್ನುಳಿದ ಆರೋಪಿಗಳ ತಪಾಸಣೆಗೆ ಪೊಲೀಸರು ಮುಂದಾಗಿದ್ದಾರೆ.



