
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರ್ ಟೈರ್ ಬ್ಲಾಸ್ಟ್ ಆಗಿ ನಡೆದ ಅಪಘಾತದಲ್ಲಿ ಓರ್ವ ಬಾಲಕ ದುರ್ಮರಣ ಹೊಂದಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಧಾರವಾಡ ಅಳ್ಳಾವರ- ರಾಮನಗರ ರಾಜ್ಯ ಹೆದ್ದಾರಿ ಮಾರ್ಗವಾಗಿ ಗೋವಾಕ್ಕೆ ಅಳ್ಳಾವರ ಕಡೆಯಿಂದ ರಾಮನಗರ ಕಡೆಗೆ ಹೋಗುತ್ತಿದ್ದಾಗ ಕಾರ್ ನ ಟಯರ್ ಬ್ಲಾಸ್ಟ್ ಆಗಿ ರಸ್ತೆಯ ಬಲಬದಿಯಲ್ಲಿ ಇರುವ ಮರಕ್ಕೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಕಾರ್ ಚಾಲಕನ ಮಗ ಹಿಯಾಂಷ ಮೃತ ಪಟ್ಟರೆ, ಮತ್ತೋರ್ವ ಮಗ ಗುನವ (10) ಹಾಗೂ ಕಾರ್ ಚಾಲಕನ ಗೆಳೆಯನ ಮಗಳು ಸವ್ಯಾ (10) ಗೆ ಗಂಭೀರ ಗಾಯಗಳಾಗಿವೆ
ಈ ಬಗ್ಗೆ ನಂದಗಡ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.
