
ಪ್ರಗತಿವಾಹಿನಿ ಸುದ್ದಿ: ಅಂಕಿಗಳನ್ನು ಸರಿಯಾಗಿ ಬರೆದಿಲ್ಲ ಎಂಬ ಕಾರಣಕ್ಕೆ 4 ವರ್ಷದ ಮಗಳನ್ನೇ ತಂದೆ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಸೋನ್ ಭದ್ರಾ ಜಿಲ್ಲೆಯ ಖೇರತಿಯಾ ಗ್ರಾಮದ ಜೈಸ್ವಾಲ್ ಪಹರಿದಾಬಾದ್ ನಲ್ಲಿ ಈ ಘಟನೆ ನಡೆದಿದೆ. ಕೃಷ್ಣ್ ಅಜೈಸ್ವಾಲ್ (31) ತನ್ನ ಮಗಳನ್ನೇ ಹತ್ಯೆ ಮಾಡಿರುವ ಆರೋಪಿ.
ನಾಲ್ಕು ವರ್ಷದ ಮಗುವಿಗೆ 50ರವರೆಗಿನ ಮಗ್ಗಿ ಬರೆಯಲು ಬಂದಿಲ್ಲ. ಮಗಳಿಗೆ 1ರಿಂದ 50ರವರೆಗೆ ಅಂಕಿ ಬರೆಯಲು ಹೇಳಿದ್ದನಂತೆ ಆದರೆ ಮಗು ಅಂಕಿ ಬರೆಯುವಾಗ ಕೆಲ ತಪ್ಪುಗಳನ್ನು ಮಾಡಿದ್ದು, ಪೂರ್ತಿಗೊಳಿಸಿಲ್ಲ. ಇಷ್ಟಕ್ಕೆ ಆಕ್ರೋಶಗೊಂಡ ತಂದೆ ಕೃಷ್ಣಜೈಸ್ವಾಲ್, ಮಗುವಿನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಮಗು ಕೆಲ ಸಮಯದಲ್ಲೇ ಸಾವನ್ನಪಿದೆ.
ಎಂದಿನಂತೆ ತಾಯಿ ಕೆಲಸದಿಂದ ಮನೆಗೆ ಬಂದಾಗ ಮಗು ಮೃತಪಟ್ಟಿರುವುದನ್ನು ಕಂಡು ಕಂಗಾಲಾಗಿದ್ದಾಳೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕಾಗಮಿಸಿಇದ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.


