Belagavi NewsBelgaum NewsKannada NewsKarnataka NewsPolitics

*ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ: ಸಂಸದ ಈರಣ್ಣ ಕಾಡಾಡಿ*

ಪ್ರಗತಿವಾಹಿನಿ ಸುದ್ದಿ: ಅರಭಾವಿ ವಿಧಾನಸಭಾ ಮತಕ್ಷೇತ್ರದ ಬಹುತೇಕ ಗ್ರಾಮಗಳ ಜನರ ಆಶೋತ್ತರಳಿಗೆ ಸ್ಪಂದಿಸಿದ್ದೇನೆ, ರಾಜ್ಯಸಭಾ ಸಂಸದರ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ತೃಪ್ತಿ ನನಗಿದೆ ಮತ್ತು ಎಲ್ಲ ಗ್ರಾಮಗಳಲ್ಲಿ ಅನುದಾನ ಸದ್ಬಳಕೆಯಾಗಿರುವ ಹೆಮ್ಮೆ ನನಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ 2025-26 ನೇ ಸಾಲಿನ ಧಾರ್ಮಿಕ ದತ್ತಿ ಇಲಾಖೆಯ 10 ಲಕ್ಷ ರೂ.ಗಳ ಅನುದಾನದಲ್ಲಿ ದೇವಸ್ಥಾನದ ಜಿರ್ಣೋದ್ದಾರ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಕಲ್ಲೋಳಿ ಪಟ್ಟಣದಲ್ಲಿ ಈಗಾಗಲೇ ರಾಜ್ಯಸಭಾ ಸಂಸದರ ನಿಧಿಯಿಂದ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕೆ 12.5 ಲಕ್ಷ, ಪಟ್ಟಣದ ಸ್ಮಶಾನದ ಅಭಿವೃದ್ದಿಗೆ 5 ಲಕ್ಷ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಸ್ಮಾರ್ಟ ಕ್ಲಾಸ ನಿರ್ಮಾಣಕ್ಕೆ 5 ಲಕ್ಷ, ಪಿ.ಜೆ.ಎನ್. ಪ್ರೌಢ ಶಾಲೆಗೆ  ಸ್ಟೆಮ್ ಲ್ಯಾಬ್ ನಿರ್ಮಾಣಕ್ಕೆ 5 ಲಕ್ಷ, ಗರಡಿ ಮನೆಯ ದುರಸ್ತಿ ಕಾಮಗಾರಿಗೆ 5 ಲಕ್ಷ, ರಸ್ತೆ ಅಭಿವೃದ್ದಿಗೆ 7.5 ಲಕ್ಷ, ಹೀಗೆ ಕಲ್ಲೋಳಿ ಪಟ್ಟಣಕ್ಕೆ ಸುಮಾರು ಒಟ್ಟು 70 ಲಕ್ಷ ರೂ.ಗಳ ಅನುದಾನ ನೀಡಿದ್ದೇನೆ ಎಂದರು.

ಕಲ್ಲೋಳಿ ಪಟ್ಟಣ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿ ಸಂಸದರ ಅನುದಾನದಲ್ಲಿ ಸುಸಜ್ಜಿತವಾದÀ ಕಲ್ಯಾಣ ಮಂಟಪದ ಅವಶ್ಯಕತೆ ಇತ್ತು. ಅದರ ನಿರ್ಮಾಣಕ್ಕೆ ನಾನು ಸಾಕಷ್ಟು ಕಡೆ ಹಣ ಸಂಗ್ರಹ ಮಾಡಿ ಕಾರ್ಯ ಪ್ರಾರಂಭ ಮಾಡಬೇಕೆಂದರೂ ಕೂಡ ಅದಕ್ಕೆ ರಾಜಕೀಯವಾಗಿ ಸಾಕಷ್ಟು ತೋದರೆಗಳಾದವು. ಹೀಗಾಗಿ ಆ ಕೆಲಸ ಅರ್ಧಕ್ಕೆ ನಿಂತಿದೆ ಗ್ರಾಮಸ್ಥರು ಇಂತ ಕೆಲಸಗಳು ಬಂದಾಗ ಇದರ ಬಗ್ಗೆ ಗಮನ ಹರಿಸಬೇಕಾಗದ ಅಗತ್ಯ ಇದೆ. ಗ್ರಾಮಕ್ಕೆ ಯಾವುದೇ ಅನುದಾನ ಬಂದರೂ ಕೂಡ ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಬರುವಂತಹ ದಿನಗಳಲ್ಲಿ ಆ ಕೊರತೆ ನಿಗಿಸಲು ಏನು ಸಾಧ್ಯವಿದೆ ನನ್ನ ಕಡೆಯಿಂದ ಪ್ರಯತ್ನ ಮಾಡುತ್ತೇನೆ ಎಂದರು.

Home add -Advt

ಇದೇ ಸಂದರ್ಭದಲ್ಲಿ ಮಹಾಲಕ್ಷ್ಮೀದೇವಿ ದೇವಸ್ಥಾನದ ಜಿರ್ಣೋದ್ದಾರಕ್ಕೆ ಅನುದಾನ ನೀಡಿದ ರಾಜ್ಯ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪಟ್ಟಣದ ಜನತೆ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಪಟ್ಟದ ಪ್ರಮುಖರಾದ ಬಸವರಾಜ ಕಡಾಡಿ, ಲಕ್ಕಣ್ಣ ಸವಸುದ್ದಿ, ಶಿವಪ್ಪ ಬಿ.ಪಾಟೀಲ, ಧರೇಪ್ಪ ಖಾನಗೌಡ್ರ, ಪ್ರಭು ಕಡಾಡಿ, ಸಿದ್ದಪ್ಪ ಮಾಯನ್ನವರ, ಹಣಮಂತ ಸಂಗಟಿ, ಅಡಿವೆಪ್ಪ ಕುರಬೇಟ, ಶಿವಾನಂದ ಹೆಬ್ಬಾಳ, ಅಜೀತ ಚಿಕ್ಕೋಡಿ, ಮಾಯನ್ನವರ ವಕೀಲರು, ಗೂಳಪ್ಪ ವಿಜಯನಗರ, ಪರಪ್ಪ ಗಿರೆಣ್ಣವರ, ಕೃಷ್ಣಪ್ಪ ಮುಂಡಿಗನಾಳ, ಬಾಳಪ್ಪ ಮಟಗಾರ, ತುಕಾರಾಮ ಪಾಲ್ಕಿ, ಗುರುನಾಥ ವ್ಯಾಪಾರಿ, ಸಹದೇವ ಹೆಬ್ಬಾಳ, ಶಂಕರ ಖಾನಗೌಡ್ರ, ಪರಪ್ಪ ಮಳವಾಡ, ಪ್ರಕಾಶ ಬಡಿಗೇರ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Related Articles

Back to top button