Belagavi NewsBelgaum NewsCrimeKannada NewsKarnataka NewsNationalPolitics
*ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ: ಇಬ್ಬರ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಪ್ಪಾಣಿ-ಮುಧೋಳ ರಸ್ತೆ ಮೇಲೆ ವೇಗವಾಗಿ ಬಂದ ಕಾರ್ ಬೈಕ್ ಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಮೇಲೆ ಸಂಚರಿಸುತ್ತಿದ್ದ ಇಬ್ಬರು ದುರ್ಮರಣ ಹೊಂದಿದ್ದಾರೆ.
ಪ್ರಕಾಶ ರಾಮಪ್ಪ ನಿಡಸೋಸಿ (40) ಹಾಗೂ ಮಾರುತಿ ಕಾಡಪ್ಪ ಬಂಬಲವಾಡ (45) ಮೃತರು.
ಮೃತ ಇಬ್ಬರು ಬೈಕ್ ಸವಾರರು ಬೆಳಕುಡ ಗೇಟ್ ಕಡೆಯಿಂದ ನಾಗರಮುನ್ನೋಳಿ ಕಡೆಗೆ ಹೋಗುತ್ತಿದ್ದಾಗ ನಿಪ್ಪಾಣಿ- ಮುಧೋಳ ರಸ್ತೆ ಮೇಲೆ ವೇಗವಾಗಿ ಬಂದ ಕಾರ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯ (ಅಪರಾದ ಸಂಖ್ಯೆ 45/2026 ಕಲಂ 281. 125 (23), 106 (1) ಬಿಎನ್‌ಎಸ್-2023)ಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


