Belagavi NewsBelgaum NewsKannada NewsKarnataka NewsNationalPolitics
*ಐಎಎಸ್ ಅಧಿಕಾರಿ ದಿ.ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿ ನೌಕರಿ: ಸರ್ಕಾರದಿಂದ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಎಂ ಬಿಳಗಿ ಅವರಿಗೆ ಸರ್ಕಾರಿ ನೌಕರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನ. 25 ರಂದು ಮಹಾಂತೇಶ್ ಬೀಳಗಿಯವರು ಬೆಳಗಾವಿಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಮೃತಪಟ್ಟಾಗ ನೌಕರಿಯಲ್ಲಿದ್ದ ಕಾರಣ ಅವರ ಪುತ್ರಿ ಚೈತನ್ಯಾ ಎಂ ಬೀಳಗಿಗೆ ಕರ್ನಾಟಕ ನಾಗರಿಕ ಸೇವಾ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳ ಆಧಾರದ ಮೇಲೆ ನೌಕರಿಯನ್ನು ನೀಡಲಾಗಿದೆ.
ಚೈತನ್ಯಾ ಬೀಳಗಿಯವರಿಗೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿನ ಸಹಾಯಕ ಹುದ್ದೆಗೆ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯ ಮೇರೆಗೆ ಷರತ್ತುಗಳಿಗೆ ಒಳಪಟ್ಟಂತೆ ನೇಮಕ ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.



