Belagavi NewsBelgaum NewsKannada NewsKarnataka NewsLatest
*ಬೆಳಗಾವಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ: ಬಿಸಿ ಮುಟ್ಟಿಸಿದ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಳಸಂತೆಗೆ ಸೇರಿಸಲು ಶೇಖರಿಸಿದ್ದ ಪಡಿತರ ಅಕ್ಕಿಯನ್ನು ಚಿಕ್ಕೋಡಿಯ ಆಹಾರ ಇಲಾಖೆಯ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.
ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳಾದ ಸುಭಾಷ ಸಂಪಗಾವಿ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ರಾಜೇಶ ಬುರ್ಲಿ ಅವರ ಮಾರ್ಗದರ್ಶನದಲ್ಲಿ, ಖಚಿತ ಮಾಹಿತಿಯ ಮೇರೆಗೆ, ಚಿಕ್ಕೋಡಿ ತಾಲೂಕಾ ಆಹಾರ ನಿರೀಕ್ಷಕಿಯರಾದ ಐಶ್ವರ್ಯ ದಿವಟೆ ಮತ್ತು ಆಹಾರ ಶಿರಸ್ತೇದಾರರಾದ ಹನುಮಂತ ಖಾಂಡೇಕರ್ ಮತ್ತು ಪಿಎಸ್ಐ ಸದಲಗಾ ಇವರ ನೇತೃತ್ವದಲ್ಲಿ ಸುಮಾರು 4 ಟನ್ ಅಕ್ಕಿಯನ್ನು, ಸದಲಗಾ ಪಟ್ಟಣದ ಪ್ರಕಾಶ ನಗರದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಸುನೀಲ ಬಾಗಡಿ ಎಂಬಾತ ಕಾಳ ಸಂತೆಗೆ ಸಾಗಿಸಲು ಪಡಿತರ ಅಕ್ಕಿಯನ್ನು ಸಂಗ್ರಹಿಸಿದ ಬಗ್ಗೆ ಆರೋಪಿಸಲಾಗಿದೆ. ಬಡವರ ಹೊಟ್ಟೆಗೆ ಸೇರಬೇಕಾದ ಅಕ್ಕಿಯನ್ನು ವಶಪಡಿಸಿಕೊಂಡು ಚಿಕ್ಕೋಡಿ ತಾಲೂಕಾ ಆಹಾರ ವಿಭಾಗದ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಸದಲಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದೆವರೆದಿದೆ.
