
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ತಾಲೂಕಿನ ಕಾಡಸಿದ್ದೇಶ್ವರ ಆಶ್ರಮ ಹತ್ತಿರ ತಂಗಡಿ ಸಿನ್ನಾಳ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಆಡುತ್ತಿದ್ದ 7 ಜನರನ್ನು ಬಂಧಿಸಿ 10,500 ರೂಪಾಯಿ, 5 ಮೊಬೈಲಗಳು ಹಾಗೂ 5 ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ ಮಹಾನಿಂಗ ರಾಮಪ್ಪ ಮಾಳಿಣ ಶಶಿಕಾಂತ ಹರೀಬಾ ಕಾಂಬಳೆ, ಆಸೀಪ ಅಸ್ಪಾಕಹುಸೇನ ದೇಸಾಯಿ, ರವಿ ಶೇಖರ ಕುಂಬಾರ, ನೀಸಾರ ಮಹ್ಮದ ಡಾಂಗೆ, ಲಿಯಾಜ ಹಸನಸಾಬ ಫಕಾಲಿ ಹಾಗುಯ ಪ್ರವೀಣ ರಾಚಪ್ಪ ಗೌಡಪ್ಪನವರ ಎಂಬುವರನ್ನು ಬಂಧಿಸಲಾಗಿದೆ.
ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ 10.500 ರೂಪಾಯಿ ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ್ ಅಂಬುವ ಜೂಜಾಟ ಆಡುತ್ತಿದ್ದರು.
ಈ ಬಗ್ಗೆ ಅಥಣಿ ಪೊಲೀಸ ಠಾಣಾ ಅಪರಾಧ ಸಂಖ್ಯೆ 85/2026 ಕಲಂ 87 ಕೆ.ಪಿ. ಆ್ಯಕ್ಟ್ 112 ಬಿಎನ್ಎಎಸ್ ಆಕ್ಟ-2023 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.



