Belagavi NewsBelgaum NewsKannada NewsKarnataka NewsLatestPolitics
*ಮರಗಳ ಮಾರಣಹೋಮ: ವರದಿ ಸಲ್ಲಿಕೆಗೆ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಗಾಯರಾಣ, ಗೋಮಾಳ ರಿ.ನಂ.359ರ ಜಮೀನಿನಲ್ಲಿ ಮರಗಳ ಅಕ್ರಮ ಕಡಿತಲೆಯಾಗಿರುವ ಕುರಿತು ಬೆಳಗಾವಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.
ತನಿಖಾ ವರದಿ ಸ್ವೀಕೃತವಾದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




