Kannada NewsKarnataka NewsLatest

*BREAKING: ರಣರಂಗವಾಯ್ತು ಬಿಡದಿ: ಸರ್ವೆ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳಿಗೆ ರೈತ ಮಹಿಳೆಯರಿಂದ ಪೊರಕೆ ಸೇವೆ; ಕಾರಿನ ಗಾಜು ಪುಡಿಗೈದು ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಬಿಡದಿ ಟೌನ್ ಶಿಪ್ ನಿರ್ಮಾನ್ ಅವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರ ವಿರೋಧದ ನಡುವೆಯೂ ಇಂದು ಸರ್ವೆ ಕಾರ್ಯಕ್ಕೆ ಅಧಿಕಾರಿಗಳು ಆಗಮಿಸಿದ್ದುಮ್, ಈ ವೇಳೆ ರೈತ ಮಹಿಳೆಯರು ಅಧಿಕಾರಿಗಳನ್ನು ಹೊಡೆದು ಸ್ಥಳದಿಂದ ವಾಪಸ್ ಕಳುಹಿಸಿದ್ದಾರೆ.

ರಾಮನಗರದ ಬಿಡದಿ ಬಳಿಯ ಮಂಡಲಹಳ್ಳಿಯಲ್ಲಿ ರೈತರು ಹಾಗೂ ರೈತ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಟೌನ್ ಶಿಪ್ ನಿರ್ಮಾಣಕ್ಕಾಗಿ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಆಗಮಿಸಿದ್ದರು. ವಿಷಯ ತಿಳಿದು ರೊಚ್ಚಿಗೆದ್ದ ರೈತ ಮಹಿಳೆಯರು ಎರಡು ಕಾರುಗಳ ಗಾಜುಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಕೆಳಗಿಳಿಯುತ್ತಿದ್ದಂತೆ ಹಿಂದೆಮುಂದೆ ನೋಡದೇ ಪೊರಕೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ. ಪೊಲೀಸರು ಪ್ರತಿಭಟನಾ ಮಹಿಳೆಯರನ್ನು ತಡೆಯಲು ಮುಂದಾದರೂ ಸಾಧ್ಯವಾಗಿಲ್ಲ. ಬೆಳೆ ಬೆಳೆಯುವ ಭೂಮಿ ಕಳೆದುಕೊಂಡು ನಾವು ಎಲ್ಲಿಗೆ ಹೋಗಲಿ ಎಂದು ರೈತರು ಕಣ್ಣೀರಿಟ್ಟಿದ್ದಾರೆ. ಪೊಲೀಸರನ್ನು ತಳ್ಳಿ, ಅಧಿಕಾರಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿದ್ದಾರೆ.

ಪೊಲೀಸರು ಅಧಿಕಾರಿಗಳನ್ನು ರಕ್ಷಿಸಿ ಕಾರು ಹತ್ತಿಸಿ ವಾಪಸ್ ಕಳುಹಿಸಿದ್ದಾರೆ. ಬಿಡದಿ ಭೂಮಿಗಾಗಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಬಿಡದಿ ರಣರಂಗವಾಗಿ ಮಾರ್ಪಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button