Kannada NewsKarnataka NewsLatestTravel

*ಭಾರಿ ಮಳೆ, ಭೂಕುಸಿತ: ರಾಜ್ಯದ ಈ ರೈಲುಗಳ ಸಂಚಾರ ಸ್ಥಗಿತ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಭೂ ಕುಸಿತ ಸಂಭವಿಸಿದೆ. ಅನೇಕ ರೈಲು ಸಂಚಾರಗಳು ತಾತ್ಕಾಲಿಕ ಸ್ಥಗಿತಗೊಂಡಿವೆ.

ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಶನಿವಾರ ರಾತ್ರಿ ಭೂಕುಸಿತ ಸಂಭವಿಸಿದೆ. ಪರಿಣಾಮ ಕರಾವಳಿ ಮತ್ತು ಬೆಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Home add -Advt

ಬೆಂಗಳೂರಿನಿಂದ ಹೊರಟಿದ್ದ ರೈಲು ಸಂಖ್ಯೆ 16585 SMVT ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ಹಾಸನದಲ್ಲಿ ಭಾಗಶಃ ರದ್ದಾಗಿದೆ.
ರೈಲು ಸಂಖ್ಯೆ 16511 KSR ಬೆಂಗಳೂರು – ಕೋಝಿಕ್ಕೋಡ್ ಎಕ್ಸ್‌ಪ್ರೆಸ್ ಪ್ರಯಾಣ ಕೂಡ ಹಾಸನದಲ್ಲಿ ಭಾಗಶಃ ರದ್ದಾಗಿದೆ.ನಿನ್ನೆ ವಿಜಯಪುರದಿಂದ ಆರಂಭವಾಗಿದ್ದ ರೈಲು ಸಂಖ್ಯೆ 17377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣದಲ್ಲಿಯೂ ವ್ಯತ್ಯಯವಾಗಿದೆ.
ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಸಕಲೇಶಪುರದಿಂದ ಕಾರವಾರ ನಡುವೆ ಭಾಗಶಃ ರದ್ದಾಗಿದೆ.
ರೈಲು ಸಂಖ್ಯೆ 16586 ಮುರುಡೇಶ್ವರ – SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರ ಕೂಡ ಸುಬ್ರಹ್ಮಣ್ಯ ರಸ್ತೆ ಮತ್ತು SMVT ಬೆಂಗಳೂರಿನ ನಡುವೆ ಭಾಗಶಃ ರದ್ದಾಗಿದೆ.
ಆಗಸ್ಟ್​​ 01ರಂದು ಕೋಝಿಕ್ಕೋಡ್​​ನಿಂದ ಆರಂಭವಾದ ರೈಲು ಸಂಖ್ಯೆ 16512 ಕೋಝಿಕ್ಕೋಡ್ – ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣವು ಬೆಂಗಳೂರು ನಿಲ್ದಾಣದ ಬದಲಿಗೆ ಕಬಕ ಪುತ್ತೂರಿನಲ್ಲಿ ಭಾಗಶಃ ರದ್ದಾಗಿದೆ.
ಮಂಗಳೂರು ಸೆಂಟ್ರಲ್ ನಿಂದ ಆರಂಭವಾದ ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ಪ್ರಯಾಣವು ವಿಜಯಪುರ ನಿಲ್ದಾಣದ ಬದಲಿಗೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಭಾಗಶಃ ರದ್ದಾಗಿದೆ.
ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್​​ನ ಸಂಚಾರ ಕೂಡ ರದ್ದಾಗಿದೆ.

ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯದಿಂದ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದ್ದಕ್ಕೆ ವಿಷಾದಿಸುತ್ತೇವೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button