Belagavi NewsBelgaum NewsKannada NewsKarnataka NewsPolitics

*ಕಾವೇರಿ ಹೋರಾಟ: ವಾಟಾಳ್ ನಾಗರಾಜ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶದ ವಿರುದ್ಧ ಪ್ರತಿಭಟಿಸಲು ಆ. 13 ರಂದು ಕರ್ನಾಟಕ ಬಂದ್ ಕರೆಕೊಟ್ಟಿರುವ ರಾಜ್ಯ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ  ವಾಟಾಳ್ ನಾಗರಾಜ ಬುಧವಾರ ಆ. 5 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ.

ಬುಧವಾರ ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಕನ್ನಡ ಸಂಘಟನೆಗಳ, ವಿವಿಧ ಸಮುದಾಯಗಳ, ರಿಕ್ಷಾ ಚಾಲಕರ ಸಂಘಟನೆಗಳ, ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯ, ರೈತ ಸಂಘಟನೆಗಳ ನಾಯಕರೊಂದಿಗೆ ವಾಟಾಳ್ ನಾಗರಾಜ ಮತ್ತು ಇತರ ನಾಯಕರು ಚರ್ಚೆ ನಡೆಸಲಿದ್ದಾರೆ.

ಕಾವೇರಿ ವಿಷಯದ ಜೊತೆಗೆ ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕೆಂಬ ವಿಷಯವನ್ನು ಸಹ ಒಕ್ಕೂಟವು ಸೇರಿಸಿದೆಯೆಂದು ಬೆಂಗಳೂರಿನಲ್ಲಿ ಕಳೆದ ಶುಕ್ರವಾರ ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ರಾಜು ಕೋಲಾ ಅವರು ಸಭೆಯಲ್ಲಿ ತಿಳಿಸಿದರು.

ಬೆಳಗಾವಿ ಪಾಲಿಕೆಯ ವಿಷಯವನ್ನು ವಾಟಾಳ್ ನಾಗರಾಜ ಅವರು ಕಳೆದ ಶುಕ್ರವಾರ ನಗರಾಭಿವೃದ್ಧಿ ಖಾತೆ ಸಚಿವ  ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ. ತಾವು ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯವನ್ನು ತಂದಿರುವುದಾಗಿ ಸಚಿವರು ವಾಟಾಳ್ ನಾಗರಾಜ ಅವರಿಗೆ ತಿಳಿಸಿದರೆಂದು ಕೋಲಾ ಅವರು ಸಭೆಯಲ್ಲಿ ವಿವರಿಸಿದರು.

Home add -Advt

ಕರ್ನಾಟಕ ಬಂದ್ ಆಚರಣೆ ಸಂಬಂಧ ಸಭೆಯಲ್ಲಿ ಚರ್ಚೆ ನಡೆದು ಆಗಸ್ಟ್ 10 ವರೆಗೆ ಪರಿಸ್ಥಿತಿಯನ್ನು ನೋಡಿಕೊಂಡು, ವಿವಿಧ ಸಂಘಟನೆಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸಭೆಯುತೀರ್ಮಾನಿಸಿತು.

ಹಿರಿಯ ಕನ್ನಡ ಹೋರಾಟಗಾರ  ಅಶೋಕ ಚಂದರಗಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

Related Articles

Back to top button