*ಕಠಿಣ ಸಮಯದಲ್ಲಿ ಹನುಮಾನ್ ಚಾಲಿಸ ಪಠಿಸಿದೆ; ವಿಮಾನದಲ್ಲಿನ ಕರಾಳ ಅನುಭವವನ್ನು ಪ್ರಧಾನಿ ಮೋದಿ ಜೊತೆ ಹಂಚಿಕೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್*

ಪ್ರಗತಿವಾಹಿನಿ ಸುದ್ದಿ: ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನದಲ್ಲಿ ಸಹ-ಪೈಲಟ್ ನಡೆಸಿದ ದಾಳಿಯ ಪ್ರಯತ್ನವನ್ನು ವಿಫಲಗೊಳಿಸುವ ಮೂಲಕ 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಯುಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಅಪ್ಟನ್ ಸ್ಮಿತ್ ಮಚ್ಚಾರ್ ಅವರೊಂದಿಗೆ ವಿಡಿಯೋ ಕಾಲ್ ನಲ್ಲಿ ಮತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದೀ ದೇಶವೇ ನಿಮಗಾಗಿ ಪ್ರಾರ್ಥಿಸುತ್ತಿದೆ. ನೀವು ಬೇಗನೇ ಗುಣಮುಖರಾಗಿ. ಶೀಘ್ರದಲ್ಲೇ ನಾನು ನಿಮ್ಮನ್ನು ಭೇಟಿಯಾಗಲಿದ್ದೇನೆ. ನಿಮ್ಮ ಒಂದು ಕ್ಷಣದ ನಿರ್ಧಾರ 180 ಪ್ರಯಾಣಿಕ ಪ್ರಾಣ ಉಳಿಸಿದೆ. ಭಾರತೀಯರು ಎಂದಿಗೂ ಪ್ರಾಣ ತೆಗೆಯುವವರಲ್ಲ, ಪ್ರಾಣ ಉಳಿಸುವವರು. ನೀವು ಇಡೀ ದೇಶದ ಹೆಮ್ಮೆಯ ಹೀರೋ ಎಂದು ಹೇಳಿದರು.
ಇದೇ ವೇಳೆ ಕಾಕ್ ಪಿಟ್ ನಲ್ಲಿ ಅಂದು ಸಹ ಪೈಲಟ್ ನಡೆಸಿದ ದಾಳಿ ವೇಳೆ ಕಠಿಣ ಸಂದರ್ಭ ಎದುರಾದಾಗ ತಾನು ಹನುಮಾನ್ ಚಾಲೀಸ ಪಠಿಸಿದೆ. ಅದು ನನಗೆ ಧೈರ್ಯ ನೀಡಿತು. ಸಾಮಾನ್ಯವಾಗಿ ಎನಾದರೂ ಸಂಕಷ್ಟ ಎದುರಾದಾಗ ಹನುಮಾನ್ ಚಾಲೀಸಾ ಪಠಿಸುವುದು ರೂಢಿ. ಅಂದು ನಾನು ಕೂಡ ತಕ್ಷಣ ಹನುಮಾನ್ ಚಾಲೀಸ ಪಠಿಸಿದೆ ಎಂದು ಸ್ಮಿತ್ ಮಚ್ಚಾರ್ ಭಾವುಕರಾದರು.
ನೀವು ನಮಗೆಲ್ಲರಿಗೂ ಆದರ್ಶ. ಪ್ರಧಾನಿಯವರೊಂದಿಗೆ ಮಾತನಾಡುತ್ತೇನೆ ಎಂಬ ನಿರೀಕ್ಷೆಯೂ ಇರಲಿಲ್ಲ. ನಿಮ್ಮೊಂದಿಗೆ ಮಾತನಾಡಿದ್ದು ಬಹಳಅ ಸಂತೋಷವಾಯಿತು ಎಂದು ಸ್ಮಿತ್ ಮಚ್ಚಾರ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿಯವರು ಅವರ ಧೈರ್ಯವನ್ನು ಶ್ಲಾಘಿಸಿದರು. ಪೈಲಟ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರು ಯುಎಇಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ತಿಳಿಸಿದ್ದಾರೆ. ಇಲ್ಲಿನ ಆಸ್ಪತ್ರೆಯಲ್ಲಿ ಗಾಯಗೊಂಡ ಪೈಲಟ್ ಮತ್ತು ಅವರ ಕುಟುಂಬವನ್ನು ಭೇಟಿಯಾದ ದೀಪಕ್ ಮಿತ್ತಲ್, ಸ್ಮಿತ್ ಮಚ್ಚಾರ್ ಅವರ ಮನೋಬಲವು ಉತ್ತಮವಾಗಿದೆ. ಅವರು ಹರ್ಷಚಿತ್ತದಿಂದ ಇದ್ದಾರೆಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



