Kannada NewsKarnataka News

ಅಂಗಡಿ ಇಂಟರ್ ನ್ಯಾಶನಲ್ ಸ್ಕೂಲ್ ವಾರ್ಷಿಕೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪಾಲಕರು ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೇ ಉತ್ಸಾಹದಿಂದ ಕಲಿಯಲು ಮಾರ್ಗದರ್ಶನ ಮಾಡಬೇಕು. ಅಲ್ಲದೇ  ಎಲ್ಲ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ಕೊಡಬೇಕೆಂದು ನಿವೃತ್ತ ಕರ್ನಲ್ ದಿಕ್ಷಾ ಶುಕ್ಲಾ ಕರೆ ನೀಡಿದರು.
ನಗರದ ಅಂಗಡಿ ಇಂಟರನ್ಯಾಷನಲ್ ಸ್ಕೂಲಿನ ಪೂರ್ವ ಪ್ರಾಥಮಿಕ ವಿಭಾಗದ ೫ನೇ ವಾರ್ಷಿಕೋತ್ಸವ ಸಮಾರಂಭವನ್ನು ಶುಕ್ರವಾರ  ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಯನ್ನು ಮಾಡಲು ಶಿಕ್ಷಕರು ಹಾಗೂ ಪಾಲಕರು ಸಹಕರಿಸಬೇಕು. ಅವರು ಕಲಿತ ಶಾಲೆಗೆ ಹಾಗೂ ದೇಶಕ್ಕೆ ಒಳ್ಳೆಯ ಹೆಸರನ್ನು ತರುವಂತೆ ಅವರ ಭವಿಷ್ಯವನ್ನು ರೂಪಿಸಬೇಕೆಂದು ಅವರು ಹೇಳಿದರು.
ವಾರ್ಷಿಕ ವರದಿಯನ್ನು ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ ಓದಿದರು.
ಸಂಸ್ಥೆಯ ಉಪಾಧ್ಯಕ್ಷೆ ಮಂಗಲಾ ಅಂಗಡಿ, ನಿರ್ದೇಶಕಿ ಶ್ರದ್ಧಾ ಶೆಟ್ಟರ್, ಆಡಳಿತಾಧಿಕಾರಿ ರಾಜು ಜೋಶಿ, ಲಕ್ಷ್ಮಿ ಸಾಂಗಲಿ, ಗಿರೀಶ ಕುಲಕರ್ಣಿ, ವಿನಾಯಕ ಜ್ಯೋತಿ, ಕುಂದನ ನಾಯಿಕ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗ ಹಾಗೂ ಪಾಲಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ರೀಡೆ, ಚಿತ್ರಕಲೆ, ಸಾಂಸ್ಕೃತಿಕ ಮುಂತಾದ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸ್ಕೂಲಿನ ಮಕ್ಕಳು ನೃತ್ಯ, ಕಿರು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು.
ಆಶಾ ರಜಪೂತ ಸ್ವಾಗತಿಸಿದರು. ಶಿಕ್ಷಕಿ ಡಯಾನಾ ಡಿಸೋಜಾ ಪರಿಚಯಿಸಿದರು. ಭಾರತಿ ಪಾಟೀಲ ನಿರೂಪಿಸಿದರು. ಉನ್ನತಿ ರಾಮಚಂದಾನಿ ವಂದಿಸಿದರು.
.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button