Kannada NewsLatestNational

*ಇಂಜಿನ್ ನಲ್ಲಿ ಬೆಂಕಿ: ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ವಿಮಾನ ತುರ್ತು ಭೂಸ್ಪರ್ಶ*

ಪ್ರಗತಿವಾಹಿನಿ ಸುದ್ದಿ: ಟರ್ಕಿ ಏರ್ ಲೈನ್ಸ್ ವಿಮಾನವೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ತುರ್ತು ಭೂಸ್ಪರ್ಶವಾದ ಘಟನೆ ನಡೆದಿದೆ.

ಟರ್ಕಿ ಏರ್ ಲೈನ್ಸ್ ನ TK-727 ವಿಮಾನ ನೇಪಾಳದಿಂದ ಇಸ್ತಾಂಬುಲ್ ಗೆ ಹೊರಟಿತ್ತು. ಕೋಲ್ಕತ್ತಾದ ವಾಯುಪ್ರದೇಶದ ಮೂಲಕ ತೆರಳುತ್ತಿದ್ದಾಗ ವಿಮಾನದ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್ ಕೋಲ್ಕತ್ತಾ ಏರ್ ಟ್ರಾಫಿಕ್ ಕಂಟ್ರೋಲ್ ನ್ನು ಸಂಪರ್ಕಿಸಿದ್ದಾರೆ. ಎಟಿಸಿ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಕೋಲ್ಕತ್ತಾ ಏರ್ ಪೋರ್ಟ್ ನಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ವಿಮಾನದಲ್ಲಿದ್ದ 236 ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Home add -Advt


Related Articles

Back to top button