Kannada NewsKarnataka NewsLatest

*ಏರ್ ಪೋರ್ಟ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರಾಭರಣ ಕಳ್ಳತನ*

ಪ್ರಗತಿವಾಹಿನಿ ಸುದ್ದಿ: ಏರ್ ಪೋರ್ಟ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ವಜ್ರಾಭರಣಗಳು ಕಳ್ಳತನವಾಗಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಏರ್ ಪೋರ್ಟ್ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ವಜ್ರಾಭರಣಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ. ಏರ್ ಪೋರ್ಟ್ ನಲ್ಲಿ ಮಹಿಳೆ ಚೆಕ್ ಇನ್ ನಲ್ಲಿ ಚಿನ್ನಾಭರಣ ತೋರಿಸಿ ಬ್ಯಾಗ್ ಗೆ ಟ್ಯಾಗ್ ಮಾಡಿದ್ದರು. ಲಗೇಜ್ ಬ್ಯಾಗ್ ನಲ್ಲಿಟ್ಟಿದ್ದ ಚಿನ್ನ ದುಬೈಗೆ ಹೋಗುವಷ್ಟರಲ್ಲಿ ಕಳ್ಳತನವಾಗಿದೆ.

Home add -Advt

ದುಬೈಗೆ ಹೋಗಿ ಬ್ಯಾಗ್ ತೆರೆದು ನೋಡಿದರೆ ಚಿನ್ನ, ವಜ್ರಾಭರಣಗಳು ಇಲ್ಲ. 790 ಗ್ರಾಂ ಚಿನ್ನ, 8 ಲಕ್ಷ ಬೆಲೆ ಬಾಳುವ ವಜ್ರಾಭರಣಗಳು ಇದ್ದವು. ಗಾಬರಿಯಾಗಿರುವ ಮಹಿಳೆ ಕಂಗಾಲಾಗಿದ್ದಾರೆ. ಏರ್ ಪೋರ್ಟ್ ಸಿಬ್ಬಂದಿಯೇ ಚಿನ್ನಾಭರಣ ಕಳ್ಳತನ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೆಂಗಳೂರು ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.


Related Articles

Back to top button