*ಹರ್ಷ ಟ್ರೋಫಿ ಗೆದ್ದ ಕ್ವಾಲಿಟಿ ಡೆವಲಪರ್ಸ್ ತಂಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಾಳೇಕುಂದ್ರಿ ಬಿ ಕೆ ಗ್ರಾಮದ ವೈರಲೆಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಹರ್ಷ ಟ್ರೋಫಿ ಸೀಸನ್ 6 ಕ್ರಿಕೆಟ್ ಪಂದ್ಯಾವಳಿ ಭಾನುವಾರ ಮುಕ್ತಾಯವಾಯಿತು.
ಬೆಳಗಾವಿ ಗ್ರಾಮೀಣ ಭಾಗದ ಹಲವಾರು ತಂಡಗಳು ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲಲು ಸೆಣಸಾಟ ನಡೆಸಿದ್ದವು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ವಾಲಿಟಿ ಡೆವೆಲಪರ್ಸ್ ಬಾಳೇಕುಂದ್ರಿ ಬಿ.ಕೆ ತಂಡ ಜಯಭೇರಿ ಬಾರಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ರನ್ನರ್- ಅಪ್ ಸ್ಥಾನವನ್ನು ಕಡೋಲಿ ಗ್ರಾಮದ ಅಜಯ್ ಅಯೋಧ್ಯ 11 ತಂಡ ಪಡೆದುಕೊಂಡರೆ, ಗೊಂಡವಾಡದ ಎಸ್.ಬಿ.ಎಸ್. ಮೌಳಿ ದಾಬಾ ತಂಡ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಈ ಮೂರು ತಂಡಗಳಿಗೆ ವಿಧಾನ ಪರಿಷತ್ ಸದಸ್ಯ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಪ್ರಶಸ್ತಿಗಳನ್ನು ವಿತರಿಸಿದರು.

ಹರ್ಷ ಟ್ರೋಫಿ ಗ್ರಾಮೀಣ ಭಾಗದ ತಂಡಗಳಿಗೆ ಪ್ರೋತ್ಸಾಹ ನೀಡಿ ಕ್ರೀಡೆಗಳಲ್ಲಿ ತೊಡಗಿಸಲು ಉತ್ತಮ ವೇದಿಕೆಯಾಗಿದೆ.
ಈ ವೇಳೆ ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ನಾಗೇಶ್ ದೇಸಾಯಿ, ಯುವ ಧುರೀಣರಾದ ಬಸವರಾಜ ಕಲ್ಲೂರ್, ಅಬ್ದುಲ್ ಬಾಗವಾನ್ ರಾಕೇಶ್ ಪಾಟೀಲ, ಅಪ್ಸರ್ ಜಮಾದಾರ್, ಜಮೀಲ್ ಖಾಜಿ, ಅರ್ಬಾಜ್, ನೂರ್ ಜಮಾದಾರ, ನಿಹಾಲ್, ಪ್ರಹ್ಲಾದ, ಕ್ರಿಕೆಟ್ ಪ್ರಿಯರು, ಕ್ರಿಕೆಟ್ ಮ್ಯಾನೆಜ್‌ಮೆಂಟ್ ನ ಪದಾಧಿಕಾರಿಗಳು, ವಿವಿಧ ಕ್ರಿಕೆಟ್ ತಂಡಗಳ ಆಟಗಾರರು ಉಪಸ್ಥಿತರಿದ್ದರು.



