Kannada NewsKarnataka NewsLatestNational

*ಟ್ರೆಂಡಿಂಗ್ ನಲ್ಲಿದೆ ಗ್ರೀನ್ ಸೆಕ್ಸ್: ಅಂದರೇನು..?*

ಪ್ರಗತಿವಾಹಿನಿ ಸುದ್ದಿ: ಆಧುನಿಕ ಯುಗದಲ್ಲಿ ಹೊಸ ಹೊಸ ಟ್ರೆಂಡ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಪಡೆದುಕೊಳ್ತಿದೆ. ಸದ್ಯಕ್ಕೆ ಹಾಗೆ ಫೇಮಸ್ ಆಗಿರೋ ಟ್ರೆಂಡ್ ಅಂದರೆ ಗ್ರೀನ್ ಸೆಕ್ಸ್. ಹಾಗಾದ್ರೆ ಈ ಗ್ರೀನ್ ಸೆಕ್ಸ್ ಎಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ.

ಜೆನ್ ಜೀಗಳನ್ನು ಅನೇಕ ಕಾರಣಕ್ಕೆ ಬಯ್ಯೋ ಮಂದಿಯೂ ಅವರ ಈ ಒಂದು ಟ್ರೆಂಡ್ ಅನ್ನು ಕೊಂಚ ಅಭಿಮಾನದಿಂದ ನೋಡುತ್ತಿದ್ದಾರೆ. ಅಷ್ಟಕ್ಕೂ ಈ -ಗ್ರೀನ್ ಸೆಕ್ಸ್ ಅನ್ನೋದು ಸಖತ್ ಇಂಟರೆಸ್ಟಿಂಗ್, ಆರೋಗ್ಯಕ್ಕೂ ಒಳ್ಳೆಯದಾಗಿರುವ ಕಾರಣ ಜೆನ್ ಜೀಗಳು ಸೃಷ್ಟಿಸಿರೋ ಈ ಟ್ರೆಂಡ್ ಅನ್ನು ಅವರ ಹಿಂದಿನ ತಲೆಮಾರು ಅಂದರೆ ಮಿಲೇನಿಯಲ್ಗಳೂ ಸ್ವಲ್ಪ ಮಟ್ಟಿಗೆ ಜೆನ್ ಎಕ್ಸ್‌ಗಳೂ ಫಾಲೋ ಮಾಡ್ತಿದ್ದಾರೆ. ಜೊತೆಗೆ ಅವರು ಗ್ರೀನ್ ಸೆಕ್ಸ್‌ನ ಬಗ್ಗೆ ಪಾಸಿಟಿವ್ ಆಗಿ ಮಾತನಾಡಲು ಶುರು ಮಾಡಿದ್ದಾರೆ. 

ಹಾಗಾದ್ರೆ ಏನಿದು ಗ್ರೀನ್ ಸೆಕ್ಸ್?

ಲೈಂಗಿಕ ಜೀವನದಲ್ಲಿ ಬಳಸುವ ಉತ್ಪನ್ನಗಳು ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುವುದೇ ‘ಗ್ರೀನ್ ಸೆಕ್ಸ್’ ಹವಾಮಾನ ಬದಲಾವಣೆಯ ಬಗ್ಗೆ ಅತೀವ ಕಾಳಜಿ ಹೊಂದಿರುವ ಜೆನ್-ಜಿ ಯುವಕರು, ತಮ್ಮ ಪ್ರಣಯ ಜೀವನದಲ್ಲೂ ಕಾರ್ಬನ್ ಪುಟ್‌ ಪ್ರಿಂಟ್ ತಗ್ಗಿಸಲು -ಬಯಸುತ್ತಿದ್ದಾರೆ. ಅದರ ಮುಂದುವರಿಕೆಯಾಗಿ ಸೆಕ್ಸ್‌ನಲ್ಲೂ ಪರಿಸ್ನೇಹಿತನವನ್ನು ಮುನ್ನಲೆಗೆ ತರ್ತಿದ್ದಾರೆ.

Home add -Advt

ಸಾಂಪ್ರದಾಯಿಕ ಕಾಂಡೋಮ್‌ಗಳಲ್ಲಿ ಪ್ಲಾಸ್ಟಿಕ್ ಮತ್ತು ಪ್ರಾಣಿಜನ್ಯ ಪದಾರ್ಥಗಳಿರಬಹುದು. ಇದನ್ನು ವಿರೋಧಿಸುವ ಯುವಜನರು ಈಗ ಬಯೋಡಿಗ್ರೇಡಬಲ್ ಕಾಂಡೋಮ್‌ಗಳನ್ನು ಬಳಸುತ್ತಾರೆ. ಇವು ಪರಿಸರದಲ್ಲಿ ಸುಲಭವಾಗಿ ಕರಗುವ ಮತ್ತು ಸಸ್ಯಾಹಾರಿ ಲ್ಯಾಟೆಕ್ಸ್‌ನಿಂದ ತಯಾರಿಸಿದ ಉತ್ಪನ್ನಗಳು. ಜೊತೆಗೆ ಬ್ಯಾಟರಿ -ಚಾಲಿತ ಪ್ಲಾಸ್ಟಿಕ್ ಸೆಕ್ಸ್ ಆಟಿಕೆಗಳ ಬದಲಿಗೆ, ರೀಚಾರ್ಜ್ ಮಾಡಬಹುದಾದ ಅಥವಾ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಸಾಧನಗಳಿಗೆ ಆದ್ಯತೆ ನೀಡುತ್ತಿದ್ದಾರೆ. -ರಾಸಾಯನಿಕ ಮುಕ್ತ ಮತ್ತು ಸಾವಯವ ಪದಾರ್ಥಗಳಿಂದ ಕೂಡಿದ ಲ್ಯೂಬ್ರಿಕೆಂಟ್‌ಗಳ ಬಳಕೆ ಹೆಚ್ಚುತ್ತಿದೆ.

ಜೆನ್-ಜಿ ಪಾಲಿಗೆ ಸುಸ್ಥಿರತೆ ಎಂಬುದು ಆಕರ್ಷಣೆಯ ಒಂದು ಭಾಗವಾಗಿದೆ. ಡೇಟಿಂಗ್ ಆಪ್‌ಗಳಲ್ಲಿ ಪರಿಸರ ಪ್ರೇಮಿಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ದುಬಾರಿ ಗಿಫ್ಟ್ -ಅಥವಾ ಪ್ಲಾಸ್ಟಿಕ್ ಬಳಕೆಯ ಹೋಟೆಲ್‌ಗಳ ಬದಲಿಗೆ ಪಾರ್ಕ್ ಗಳಲ್ಲಿ ನಡಿಗೆ ಅಥವಾ ಸಸ್ಯಗಳನ್ನು ನೆಡುವಂತಹ ಇಕೋ-ಡೇಟ್ಸ್ ಜನಪ್ರಿಯವಾಗುತ್ತಿವೆ.

ಕೇವಲ ಲಾಭಕ್ಕಾಗಿ ಪರಿಸರವನ್ನು ಹಾಳು ಮಾಡುವ ಕಂಪನಿಗಳ ಉತ್ಪನ್ನಗಳನ್ನು ಇಂದಿನ ಯುವಜನರು ತಿರಸ್ಕರಿಸುತ್ತಿದ್ದಾರೆ. ಕಾರ್ಮಿಕರಿಗೆ ಸರಿಯಾದ ವೇತನ ನೀಡುವ ಮತ್ತು ಪಾರದರ್ಶಕ ಉತ್ಪಾದನಾ ವ್ಯವಸ್ಥೆ ಹೊಂದಿರುವ ಬ್ರಾಂಡ್‌ಗಳಿಗೆ ಅವರು ಬೆಂಬಲ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಗ್ರೀನ್ ಸೆಕ್ಸ್ ಬಗ್ಗೆ ಜನ ಒಲವು ತೋರುತ್ತಿರುವುದು ಪ್ರತಿ ದಿನ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ.

Related Articles

Back to top button