Belagavi NewsBelgaum NewsKannada NewsKarnataka NewsLatest
*ಗಾಂಜಾ ಕೇಸ್: ಓರ್ವ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಪಾಟೀಲ ಮಾಳ ಗಲ್ಲಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಆರೋಪಿಯನ್ನು ಪರಿಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.
ಉತ್ತರ್ಷ ಸುನೀಲ ವರ್ಮಾ (24) ಗಾಂಜಾ ಕೇಸ್ ನಲ್ಲಿ ಲಾಕ್ ಆದ ವ್ಯಕ್ತಿ. ಖಡೇಬಜಾರ ಪೊಲೀಸ್ ಠಾಣೆಯ ಎಎಸ್‌ಐ ವಿ ಚಿನ್ನಸ್ವಾಮಿ ಹಾಗೂ ಸಿಬ್ಬಂದಿಯವರು ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ. ಅವನ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.13/2026 ಕಲಂ.27(b) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.




