Belagavi NewsBelgaum NewsKarnataka NewsLatestPolitics

*ಜನ ಸೇವೆಯೇ ದೇವರ ಸೇವೆ ಎಂದು ಕೆಲಸ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿನಲ್ಲಿ ನಂಬಿಕೆ ಇಟ್ಟು, ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದು ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.


ಮುತಗಾ ಗ್ರಾಮದಲ್ಲಿ ನಡೆದ ಶ್ರೀ ಗ್ರಂಥರಾಜ ಸಾಂಪ್ರದಾಯಿಕ ಪಾರಾಯಣ ಸೋಹಳಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ 25 ವರ್ಷದಿಂದ ಬೆಳಗ್ಗೆಯಿಂದ ರಾತ್ರಿಯವರೆಗೆ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ನಿಮ್ಮ ಸೇವೆಯೇ ದೇವರ ಸೇವೆ ಎಂದು ಕೆಲಸ ಮಾಡುತ್ತಿದ್ದೇನೆ. ರೈತ ಕುಟುಂಬದಿಂದ ಬಂದು, ಸರಕಾರಿ ಶಾಲೆಯಲ್ಲಿ ಕಲಿತು, ಸರಕಾರಿ ಬಸ್ ನಲ್ಲಿ ಓಡಾಡಿ, ಹೆಚ್ಚು ಕಲಿಯಲು ಅವಕಾಶವಿಲ್ಲದಿದ್ದರೂ ಸಮಾಜ ಸೇವೆಯಿಂದಲೇ ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದರು.

ಭಾರತ ಮಹಾನ್ ದೇಶ, ನಮ್ಮ ಸಂಸ್ಕೃತಿ ಉನ್ನತವಾದದ್ದು. ಮಕ್ಕಳಿಗೆ ನಮ್ಮ ಸಂಸ್ಕೃತಿ ಕುರಿತು ತಿಳಿಸಲು ಪಾಲಕರು ಸ್ವಲ್ಪ ಸಮಯ ಮೀಸಲಿಡಬೇಕು.

Home add -Advt


ಮಹಾನ್ ಪುರುಷರ ಕುರಿತು, ಇತಿಹಾಸದ ಕುರಿತು ಮಕ್ಕಳಿಗೆ ತಿಳಿಸಬೇಕು. ನಾನು ಕಳೆದ 7 ವರ್ಷಗಳಲ್ಲಿ ಕ್ಷೇತ್ರದ 154 ಮಂದಿರಗಳ ಜೀರ್ಣೋದ್ದಾರ ಮಾಡಿದ್ದೇನೆ. ಬಹಳ ಭಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಹೆಬ್ಬಾಳಕರ್ ಹೇಳಿದರು.

ಸಾದ್ವಿ ರುಕ್ಷ್ಮಿಣಿತಾಯಿ ಹಾವರೆ ಅವರ ಸುಂದರ ಹಾಗೂ ಅರ್ಥಪೂರ್ಣ ಪಾರಾಯಣವು ಮನಸ್ಸಿಗೆ ಶಾಂತಿ ಮತ್ತು ಆಧ್ಯಾತ್ಮಿಕ ಚೈತನ್ಯವನ್ನು ನೀಡಿತು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಚೇತನ ಚೌಗುಲೆ, ಸಚಿನ ಪಾಟೀಲ, ಶಿವಾಜಿ ಪಾಟೀಲ, ಬಾಬು ಪಾಟೀಲ, ಯಲ್ಲಪ್ಪ ಕೇದಾರ್, ನಾಗೇಶ್ ದೇಸಾಯಿ, ಗಜಾನನ ಕಣಬರಕರ್, ರಾಯಣ್ಣ ಕಾಕಾ, ಶರದ, ಪಿಂಟು, ಗ್ರಾಮದ ನೂರಾರು ಮಹಿಳೆಯರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

Related Articles

Back to top button