Belagavi NewsBelgaum NewsKarnataka NewsLatestPolitics

*ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾದ ಬಜೆಟ್: ಡಾ.ಸೊನಾಲಿ ಸರ್ನೋಬತ್*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ರಾಜ್ಯ ಬಜೆಟ್ ಜನಸಾಮಾನ್ಯರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ಮಹಿಳೆಯರು, ಯುವಕರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಅಭಿವೃದ್ಧಿಗೆ ಸ್ಪಷ್ಟ ಹಾಗೂ ಶಾಶ್ವತ ಯೋಜನೆಗಳು ಈ ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.

ಕೇವಲ ಭರವಸೆಗಳು ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಆರ್ಥಿಕತೆಯ ಮೇಲೆ ಹೆಚ್ಚಿನ ಸಾಲದ ಹೊರೆ ಹಾಕುವ ಪ್ರಯತ್ನ ಈ ಬಜೆಟ್‌ನಲ್ಲಿ ಕಾಣಿಸುತ್ತದೆ. ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೈಗಾರಿಕಾ ಹೂಡಿಕೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಬೇಕಾದ ದೂರದೃಷ್ಟಿಯ ಯೋಜನೆಗಳು ಕಾಣಿಸದೇ ಇರುವುದೇ ವಿಷಾದಕರ ಸಂಗತಿ.

ವಿಶೇಷವಾಗಿ ಮಹಿಳಾ ಸಬಲೀಕರಣದ ವಿಷಯದಲ್ಲಿ ದೊಡ್ಡ ಘೋಷಣೆಗಳು ಮಾಡಿದರೂ, ಮಹಿಳೆಯರ ಉದ್ಯಮ, ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಸಮರ್ಪಕ ಕ್ರಮಗಳು ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ ಎಂದಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿಗೆ ದಾರಿಯಾಗುವ, ಮಹಿಳೆಯರಿಗೆ ಮತ್ತು ಯುವಕರಿಗೆ ಶಕ್ತಿಕರವಾಗುವ ಬಜೆಟ್ ಅನ್ನು ಜನರು ನಿರೀಕ್ಷಿಸಿದ್ದರು. ಆದರೆ ಈ ಬಜೆಟ್ ಆ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ.

Home add -Advt

ಜನಹಿತ, ಅಭಿವೃದ್ಧಿ ಮತ್ತು ಆರ್ಥಿಕ ಶಿಸ್ತನ್ನು ಕಾಪಾಡುವ ಬಜೆಟ್‌ಗಾಗಿ ನಾವು ಸದಾ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

मुख्यमंत्री श्री सिद्धरामय्या यांनी सादर केलेला कर्नाटक राज्याचा अर्थसंकल्प सर्वसामान्य जनतेच्या अपेक्षा पूर्ण करण्यात अपयशी ठरलेला दिसतो. महिलांचे सक्षमीकरण, युवकांना रोजगार आणि मध्यमवर्गीय कुटुंबांना दिलासा देणाऱ्या ठोस व दीर्घकालीन योजना या अर्थसंकल्पात स्पष्टपणे दिसत नाहीत.

केवळ घोषणा आणि गॅरंटी योजनांवर भर देत राज्यावर कर्जाचा वाढता बोजा टाकण्याचा प्रयत्न या अर्थसंकल्पातून दिसून येतो. उद्योग, गुंतवणूक, पायाभूत सुविधा आणि रोजगार निर्मिती यासाठी आवश्यक असलेली दूरदृष्टी या अर्थसंकल्पात अभावाने दिसते.

विशेषतः महिलांच्या सक्षमीकरणाबाबत मोठ्या घोषणा करण्यात आल्या असल्या तरी महिलांच्या उद्योग, स्वयंरोजगार आणि आर्थिक स्वावलंबनासाठी प्रभावी उपाययोजना या अर्थसंकल्पात पुरेशा प्रमाणात दिसत नाहीत.

राज्याच्या सर्वांगीण विकासाला चालना देणारा आणि महिलांना व युवकांना सक्षम करणारा अर्थसंकल्प जनतेला अपेक्षित होता. मात्र हा अर्थसंकल्प त्या अपेक्षांवर पूर्णपणे खरा उतरलेला नाही.

जनहित, विकास आणि आर्थिक शिस्त जपणारा अर्थसंकल्प व्हावा यासाठी आम्ही नेहमीच आवाज उठवत राहू.
Dr Sonali Sarnobat
Bjp
– महिला मोर्चा सचिव

Related Articles

Back to top button