LatestWorld

*12ನೇ ದಿನಕ್ಕೆ ಕಾಲಿಟ್ಟ ಯುದ್ಧ: ಇರಾನಿನ 16 ಹಡಗುಗಳನ್ನು ನಾಶಪಡಿಸಿದ ಅಮೆರಿಕ*

ಪ್ರಗತಿವಾಹಿನಿ ಸುದ್ದಿ: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಇರಾನಿನ 16 ಹಡಗುಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಹಾರ್ಮುಜ್​ ಜಲಸಂಧಿ ಬಳಸದಂತೆ ಟ್ಯಾಂಕರ್‌ಗಳನ್ನು ನಿಲ್ಲಿಸಿರುವ ಇರಾನ್​ ಬೆದರಿಕೆ ಬೆನ್ನಲ್ಲೇ ಅಮೆರಿಕಾ ಇರಾನಿನ 16 ಹಡಗುಗಳ ಮೇಲೆ ದಾಳಿ ನಡೆಸಿದೆ.

Home add -Advt

ಇಸ್ಲಾಮಿಕ್ ಗಣರಾಜ್ಯವು ಈ ಪ್ರದೇಶದ ತೈಲ ರಫ್ತನ್ನು ನಿರ್ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಲ್ಲದೆ, ವಿಶ್ವದ ಶೇಕಡಾ 20ರಷ್ಟು ತೈಲ ಸಾಗಿಸುವ ಹಾರ್ಮುಜ್​ ಜಲಸಂಧಿ ಬಳಸದಂತೆ ಇರಾನ್​ ಬೆದರಿಕೆವೊಡ್ಡಿದ ಹಿನ್ನೆಲೆಯಲ್ಲಿ, ಹಡಗುಗಳನ್ನು ನಾಶಗೊಳಿಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಸ್ಫೋಟಕಗಳನ್ನು ಇಟ್ಟಿರುವ ಬಗ್ಗೆ ಯಾವುದೇ ವರದಿಗಳಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಹೇಳಿದ್ದಾರೆ. ಟ್ರಂಪ್ ಈ ಹಿಂದೆ ಇರಾನ್‌ಗೆ ಜಲಸಂಧಿಯಲ್ಲಿ ಗಣಿ ಹಾಕದಂತೆ ಎಚ್ಚರಿಕೆ ನೀಡಿದ ಬಳಿಕ, ಅಮೆರಿಕನ್ ಸೇನೆಯು ದೃಶ್ಯಗಳೊಂದಿಗೆ ಹಡಗುಗಳ ಕುರಿತು ಮಾಹಿತಿ ಹಂಚಿಕೊಂಡಿತ್ತು. ನಿಯೋಜಿತ ಹಡಗುಗಳನ್ನು ತಕ್ಷಣ ತೆಗೆಯದಿದ್ದರೆ ಹಿಂದೆಂದೂ ಕಂಡಿರದ ಮಟ್ಟದಲ್ಲಿ ಇರಾನ್ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು.

ಇನ್ನು ಇರಾನ್‌ನ ಕ್ರಾಂತಿಕಾರಿ ಪಡೆಗಳು ಬುಧವಾರ ಕುವೈತ್‌ನಲ್ಲಿರುವ ಅಮೆರಿಕದ ನೆಲೆಯನ್ನು ಗುರಿಯಾಗಿಸಿಕೊಂಡು ಕನಿಷ್ಠ ಎರಡು ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಇರಾನಿನ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಐಆರ್‌ಜಿಸಿ ಗ್ರೌಂಡ್ ಫೋರ್ಸ್ ಕ್ಷಿಪಣಿ ಘಟಕದಿಂದ ಅರಿಫ್ಜಾನ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಎರಡು ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಗಾರ್ಡ್‌ಗಳು ಹೇಳಿರುವುದಾಗಿ ಕುವೈತ್ ನಗರದ ದಕ್ಷಿಣದಲ್ಲಿರುವ ಕ್ಯಾಂಪ್ ಅರಿಫ್ಜಾನ್ ಅನ್ನು ಉಲ್ಲೇಖಿಸಿ ಫಾರ್ಸ್ ಮತ್ತು ಮೆಹರ್ ವರದಿ ಮಾಡಿದೆ.


Related Articles

Back to top button