Kannada NewsLatestPoliticsWorld

*ವೈಮಾನಿಕ ದಾಳಿಯಲ್ಲಿ ಒಂದು ಕಾಲು ಕಟ್: ಕೋಮಾಗೆ ಜಾರಿದ ಇರಾನ್‌ನ ನೂತನ ನಾಯಕ*

ಪ್ರಗತಿವಾಹಿನಿ ಸುದ್ದಿ: ಇರಾನ್‌ನ ನೂತನ ಸುಪ್ರೀಂ ನಾಯಕ ಮೊಜಬಾ ಖಮೇನಿ, ನೇಮಕಗೊಂಡ ಕೆಲವೇ ದಿನಗಳಲ್ಲಿ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು, ಕೋಮಾದಲ್ಲಿದ್ದಾರೆ ಎಂದು ವರದಿಯಾಗಿದೆ.

ಇರಾನ್‌ನ ಹೊಸ ಸುಪ್ರೀಂ ನಾಯಕ ಮೊಜ್ಜಬಾ ಖಮೇನಿ ವಾಯುದಾಳಿಯೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಒಂದು ಕಾಲು ಕಳೆದುಕೊಂಡಿದ್ದಾರೆ. ಅವರ ಹೊಟ್ಟೆ ಅಥವಾ ಯಕೃತ್ತಿಗೆ ತೀವ್ರ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.

Home add -Advt

ಹೊಸ ಸುಪ್ರೀಂ ನಾಯಕನನ್ನು ಸಿನಾ ವಿಶ್ವವಿದ್ಯಾಲಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಕಟ್ಟಡದ ಒಂದು ಭಾಗವನ್ನು ಮುಚ್ಚಿ ಭಾರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊಜ್ಜಬಾ ಅವರ ಸ್ಥಿತಿ “ಅತ್ಯಂತ ಗಂಭೀರವಾಗಿದೆ. ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ಹೆಸರು ಮೊಹಮ್ಮದ್-ರೆಜಾ ಜಾಫರ್‌ಘಂಡಿ ಎಂದು ತಿಳಿದುಬಂದಿದೆ. ಇವರು ಇರಾನ್‌ನ ಉನ್ನತ ಆಘಾತ ಶಸ್ತ್ರಚಿಕಿತ್ಸಕರಾಗಿದ್ದು, ಆರೋಗ್ಯ, ಚಿಕಿತ್ಸೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೂ ಆಗಿದ್ದಾರೆ.

ಜಾಫರ್‌ಘಂಡಿ, 1980 ರ ದಶಕದಲ್ಲಿ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಅನುಭವ ಹೊಂದಿದ್ದು, ಇರಾನ್ ಆಡಳಿತದ ಅತ್ಯಂತ ವಿಶ್ವಾಸಾರ್ಹ ವೈದ್ಯರಲ್ಲಿ ಒಬ್ಬರಾಗಿದ್ದಾರೆ.

Related Articles

Back to top button