Kannada NewsKarnataka NewsLatest

*ದೂರು ನೀಡಲು ಬಂದಿದ್ದ ಮಹಿಳೆಯ ಮೇಲೆಯೇ ಇನ್ಸ್ ಪೆಕ್ಟರ್ ಲೈಂಗಿಕ ದೌರ್ಜನ್ಯ: ಸಂತ್ರಸ್ತೆಯ ಮಗಳ ಮೇಲು ಕಣ್ಣು ಹಾಕಿರುವ ಕಾಮುಕ*

ಪ್ರಗತಿವಾಹಿನಿ ಸುದ್ದಿ: ಕುಟುಂಬದ ವ್ಯಾಜ್ಯದ ವಿಚಾರವಾಗಿ ದೂರು ನೀಡಲು ಬಂದಿದ್ದ ಮಹಿಳೆಯ ಮೇಲೆಯೇ ಇನ್ಸ್ ಪೆಕ್ಟರ್ ಓರ್ವ ಲೈಂಗಿಕ ದೌರ್ಜನ್ಯವೆಸಗಿದ್ದು, ಆತನ ಇನ್ನಷ್ಟು ಕರಾಳ ಮುಖದ ಆಡಿಯೋ ಬಹಿರಂಗವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಇನ್ಸ್ ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ದೂರು ನೀಡಲು ಬಂದಿದ್ದ ಮಹಿಳೆಯ ಗಂಡನನ್ನು ಕೇಸ್ ನಲ್ಲಿ ಸಿಲುಕಿಸಿ ಆತನನ್ನು ಬಿಡುಗಡೆ ಮಾಡಲು ನನ್ನ ಜೊತೆ ಮಲಗಬೇಕು ಎಂದು ಮಂಚಕ್ಕೆ ಕರೆದಿದ್ದಲ್ಲದೇ ಬ್ಲ್ಯಾಅಕ್ ಮೇಲ್ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ ಸಂತ್ರಸ್ತೆಯ ಅಪ್ರಾಪ್ತ ಮಗಳ ಮೇಲೂ ಕಾಮುಕ ಇನ್ಸ್ ಪೆಕ್ಟರ್ ಕಣ್ಣು ಹಾಕಿದ್ದು, ಬೆದರಿಕೆ ಹಾಕಿದ್ದಾನೆ ಎನ್ನಲಾದ ಆಡಿಯೋ ವೈರಲ್ ಆಗಿದೆ.

ಸಂತ್ರಸ್ತೆ ಪತಿಯನ್ನು ಬಿಡಿಗಡೆ ಮಾಡಲು ನನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ನೀಡಬೇಕು ಎಂದು ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಾನು ಪೋಸ್ಟಿಂಗ್‌ಗಾಗಿ ಗೃಹಸಚಿವರಿಗೆ 50 ಲಕ್ಷ ನೀಡಿ ಬಂದಿದ್ದೇನೆ ಎಂದು ಹೇಳಿಕೊಂಡಿದಾನೆ. ಸಂತ್ರಸ್ತೆ ಮಗಳು ಹೋಗುವ ಕಾಲೇಜು ಬಳಿ ಹೋಗುವುದಾಗಿಯೂ ಹೇಳಿದ್ದಾನೆ. ಆಡಿಯೋ ವೈರಲ್ ಆದುತ್ತಿದ್ದಂತೆ ಕಾಮುಕ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಕರಣ ಗಂಭೀರ ತಿರುವು ಪದೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಅವರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button