Belagavi NewsBelgaum NewsKannada NewsKarnataka NewsPolitics

*ಬೆಳಗಾವಿಯಲ್ಲಿ ಖಮೇನಿ ಬ್ಯಾನರ್: ಶ್ರೀರಾಮ ಸೇನೆಯಿಂದ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಇರಾನ್ ಸರ್ವೋಚ್ಚ ನಾಯಕ ಖಮೇನಿ ಪರವಾಗಿ ಬ್ಯಾನರ್ ಅಳವಡಿಕೆ ಮಾಡಿರುವುದನ್ನು ವಿರೋಧಿಸಿ ಶ್ರೀ ರಾಮ ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ.‌

ಖಮೇನಿ ಭಾವಚಿತ್ರ ಅಳವಡಿಕೆ ವಿರೋಧಿಸಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಬೆಳಗಾವಿಯ ಅಶೋಕ ವೃತ್ತ ಹಾಗೂ ಕೊಲ್ಲಾಪುರ ವೃತ್ತದಲ್ಲಿ ಭಾವಚಿತ್ರ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟಿಸಿದರು.

Home add -Advt

ಇದೇ ವೇಳೆ ಖಮೇನಿ ಭಾವಚಿತ್ರ ಅಳವಡಿಕೆ ವಿರೋಧಿಸಿ ಇಸ್ರೇಲ್ ಪ್ರಧಾನಿ ಹಾಗೂ ಭಾರತ ಪ್ರಧಾನಿ ಪರವಾಗಿ ಭಾವಚಿತ್ರ ಅಳವಡಿಸಲಾಯಿತು. ಶಿವಾಜಿ ಮಹಾರಾಜರು ಅಪ್ಝಲ್ ಖಾನ್ ಅವರ ಎದೆ ಸೀಳಿದ ಭಾವಚಿತ್ರ ಹಾಕಿ ಆಕ್ರೋಶ ಹೊರ ಹಾಕಲಾಯಿತು.

ಬೆಳಗಾವಿ ನಗರದಲ್ಲಿ ಯಾವುದೇ ಬ್ಯಾನರ್ ಹಾಕದಂತೆ ಬೆಳಗಾವಿ ನಗರ ಪೊಲೀಸರು ಮನವಿ ಮಾಡಿದರು.‌ ಪೊಲೀಸರು ಮನವಿಗೆ ಸ್ಪಂದಿಸದ ಶ್ರೀರಾಮ ಸೇನೆ ಕಾರ್ಯಕರ್ತರು ಬ್ಯಾನರ್ ಹಾಕಿ ಇಸ್ರೇಲ್ ಪ್ರಧಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೆಂಬಲ ಸೂಚಿಸಲಾಯಿತು. ಶಿವಾಜಿ ಮಹಾರಾಜ ಹಾಗೂ ಜೈ ಶ್ರೀರಾಮ ಎಂದು ಘೋಷಣೆ ಕೂಗಲಾಯಿತು.

Related Articles

Back to top button