Kannada NewsLatestNational

*ರೆಪೋದರ ಹೆಚ್ಚಿಸಿದ RBI: ದುಬಾರಿಯಾಗಲಿದೆ ಸಾಲಗಳ ಬಡ್ಡಿ, ಇಎಂಐ*

ಪ್ರಗತಿವಾಹಿನಿ ಸುದ್ದಿ: ನಾಲ್ಕು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ ಹೆಚ್ಚಳ ಮಾಡಿದೆ. ಇದರಿಂದಾಗಿ ಇನ್ಮುಂದೆ ಸಾಲಗಳ ಬಡ್ಡಿದರ, ಇಎಂಐ ದುಬಾರಿಯಾಗಲಿದೆ.

ಹಣದುಬ್ಬರ ಏರಿಕೆಯ ಭೀತಿ ಹಿನ್ನೆಲೆಯಲ್ಲಿ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) 25 ಬೇಸಿಸ್ ಪಾಯಿಂಟ್‌ ಅಂದರೆ ಶೇ. 0.25ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರವು ಶೇ. 5.50ಕ್ಕೆ ಏರಿಕೆಯಾಗಿದ್ದು, ಗೃಹ, ವಾಹನ ಸೇರಿದಂತೆ ವಿವಿಧ ಬ್ಯಾಂಕ್ ಸಾಲಗಳ ಬಡ್ಡಿದರ ಹಾಗೂ ಇಎಂಐ ಮತ್ತಷ್ಟು ದುಬಾರಿಯಾಗುವುದು ಖಚಿತವಾಗಿದೆ.

2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಕೊನೆಯ ಬಾರಿಗೆ ಹೆಚ್ಚಿಸಲಾಗಿತ್ತು. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಬಡ್ಡಿದರ ಹೆಚ್ಚಳ ಮಾಡಲಾಗಿದೆ.

ಆರು ಸದಸ್ಯರಿದ್ದ ಹಣಕಾಸು ನೀತಿ ಸಮಿತಿಯು ರೆಪೋದರ ಏರಿಕೆ ಬಗ್ಗೆ ಸರ್ವಾನುಮತದಿಂದ ನಿರ್ಧಾರವನ್ನು ಕೈಗೊಂಡಿದೆ. ಅಗತ್ಯಬಿದ್ದರೆ ಮತ್ತಷ್ಟು ದರ ಏರಿಕೆಯ ಸುಳಿವನ್ನು ಆರ್‌ಬಿಐ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button