ಪ್ರಗತಿವಾಹಿನಿ ಸುದ್ದಿ, ಖಾನಾಪುರ: ವನ್ಯಪ್ರಾಣಿಗಳನ್ನು ಹತ್ಯೆಗೈದು ಸ್ವಲಾಭಕ್ಕೆ ಬಳಸುತ್ತಿದ್ದ ಒಟ್ಟು ಆರು ಆರೋಪಿತರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿ ಶ್ರೀನಾಥ ಕಡೋಲಕರ ನೇತೃತ್ವದ ತಂಡ ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಿತ್ತೂರು ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಸಿದ್ಧಲಿಂಗೇಶ್ವರ ಮಗದುಮ್ ಪ್ರಕರಣ ಪತ್ತೆ ಹಚ್ಚಿದ್ದು, ಕೊಲ್ಲಲಾದ ಜಿಂಕೆ ಹಾಗೂ ಬೈಕ್ ಮತ್ತು ಉಪಯೋಗಿಸಲಾದ ಆಯುಧ ಸಲಕರಣೆಗಳ ಸಹಿತ ಹಲವು ಆರೋಪಿತರನ್ನು ಸಿದ್ದಲಿಂಗೇಶ್ವರ ಮಗದುಮ ವಶಕ್ಕೆ ಪಡೆದಿದ್ದಾರೆ.
ಕಿತ್ತೂರಿನ ಸೋಮವಾರ ಪೇಟೆಯ ಬಸವರಾಜ ಕೊಳೆಪ್ಪ ವಡ್ಡರ(೪೮), ಗಂಗಪ್ಪ ವಸ್ತ್ರಪ್ಪ ಕಲ್ಲವಡ್ಡರ(೨೪)ಹಣಮಂತ ದುರ್ಗಪ್ಪ ಕಲ್ಲವಡ್ಡರ(೩೮), ಸುನೀಲ ಹನುಹಂತ ಮಣ್ಣಿನವಡ್ಡರ(೨೯) ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಇಂಡಿಯನ್ ಹೆರ್ ಕೊಂದ ಆರೋಪದಲ್ಲಿ ಬುಡರಕಟ್ಟಿಯ ಭರಮಪ್ಪ ಹನಮಂತ ಭಜಂತ್ರಿ(೨೮), ಮಲ್ಲೇಶ ಹನಮಂತ ಭಜಂತ್ರಿ(೨೪) ಕಿತ್ತೂರಿನ ಯುವರಾಜ ಬಸಪ್ಪ ಭಜಂತ್ರಿ(೩೫) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಎಫ್ ಎಂ. ವಿ.ಅಮರನಾಥ ತಿಳಿಸಿದ್ದಾರೆ.
ಸಿಸಿಎಫ್ ಕೆ.ಕರುಣಾಕರನ್ ಹಾಗೂ ಎಸಿಎಫ್ ಸಿ. ಬಿ.ಮಿರ್ಜಿ ಮಾರ್ಗದರ್ಶನ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ