
ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಾಹನ ಸವಾರರಿಗೆ ಬಿಗ್ ಶಾಕ್ ಕಾದಿದೆ. ಏಪ್ರಿಲ್ 1ರಿಂದ ರಾಜ್ಯದಾದ್ಯಂತ ಟೋಲ್ ದರಗಳನ್ನು ಹೆಚ್ಚಳ ಮಾಡಲಾಗುತ್ತಿದೆ.
ಏಪ್ರಿಲ್ 1ರಿಂದ ಟೋಲ್ ದರ ಶೇ 3 ರಿಂದ 5 ರವರೆಗೆ ಹೆಚ್ಚಿಸುವುದು ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಪ್ರತಿವರ್ಷದಂತೆ ಈ ಬಾರಿ ಕೂಡ ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾಗಿ ಟೋಲ್ ದರ ಪರಿಷ್ಕರಣೆ ಮಾಡಲಾಗುತ್ತಿದೆ.
ದರ ಏರಿಕೆಯಾಗುವ ಟೋಲ್ ಗಳು:
ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು–ಮೈಸೂರು ಮಾರ್ಗ)
ಬಾಗೇಪಲ್ಲಿ (ಬೆಂಗಳೂರು–ಹೈದರಾಬಾದ್ ಮಾರ್ಗ)
ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ)
ನಾಂಗ್ಲಿ (ಬೆಂಗಳೂರು–ತಿರುಪತಿ ಮಾರ್ಗ)
ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಟಿಆರ್ಆರ್ ಮಾರ್ಗ)
ಟೋಲ್ ದರವನ್ನು ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಆಧಾರಿತವಾಗಿ ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ 2.5 ರೂ. ಅಥವಾ ಅದಕ್ಕಿಂತ ಹೆಚ್ಚು ಏರಿಕೆಯಿದ್ದರೆ, ಅದನ್ನು 5 ರೂ.ಗೆ ರೌಂಡ್ ಆಫ್ ಮಾಡಲಾಗುತ್ತದೆ. ಈ ಪರಿಷ್ಕರಣೆ 2008ರ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿಗಳ ಪ್ರಕಾರ ನಡೆಯುತ್ತಿದ್ದು, ಪ್ರತೀ ಹಣಕಾಸು ವರ್ಷದ ಆರಂಭದಲ್ಲಿ ದರ ಪರಿಷ್ಕರಣೆ ಸಾಮಾನ್ಯವಾಗಿದೆ.




