ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಾಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮರಾಠವಾಡ ಪ್ರಾಂತ್ಯದಲ್ಲಿರುವ, ಪರ್ಭಾನಿ ಜಿಲ್ಲೆಯ ಪರ್ತಿಯನ್ನು ಸಾಯಿ ಬಾಬಾ ಅವರ ಜನ್ಮಸ್ಥಳವೆಂದು ಘೋಷಿಸಿ, ಅದರ ಅಭಿವೃದ್ಧಿಗೆ 100 ಕೋಟಿ ರೂ. ನೆರವು ಘೋಷಿಸಿರುವ ಸಂಗತಿ ತೀವ್ರ ವಿವಾದಕ್ಕೆ ಕಾರಣಾಗಿದ್ದು, ಇಂದಿನಿಂದ ಶಿರಡಿ ಅನಿರ್ಧಿಷ್ಠಾವದಿಗೆ ಬಂದ್ ಮಾಡಾಲಾಗಿದೆ.
ಪರ್ತಿ ಸಾಯಿಬಾಬಾ ಅವರ ಜನ್ಮಸ್ಥಳ ಎಂದಿರುವ ಠಾಕ್ರೆ ಹೇಳಿಕೆ ಬಗ್ಗೆ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಸಾಯಿಬಾಬಾ ಅವರ ಜನ್ಮಸ್ಥಳದ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಶಿರಡಿಯಲ್ಲಿ ಇದ್ದಷ್ಟು ದಿನ ಸಾಯಿಬಾಬಾ ತಮ್ಮ ಜನ್ಮಸ್ಥಳ ಅಥವಾ ತಮ್ಮ ಧರ್ಮದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮಾಜಿ ಟ್ರಸ್ಟಿ ಕೈಲಾಸ್‌ಬಾಪು ಕೋಟೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಸರಕಾರದ ಘೋಷಣೆ ಬಗ್ಗೆ ಶಿರಡಿ ಸಾಯಿಬಾಬಾ ದೇಗುಲದ ಆಡಳಿತ ಮಂಡಳಿ ಹಾಗೂ ಶಿರಡಿ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿವಾದದ ಬೆನ್ನಲ್ಲೇ ಜನವರಿ 19ರಿಂದ ಶಿರಡಿ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ಭಕ್ತರಿಗೆ ತೊಂದರೆಯಾಗದಂತೆ ದೇಗುಲವನ್ನು ಮುಚ್ಚುವುದಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಸ್ಥಳೀಯ ಬಿಜೆಪಿ ಶಾಸಕ ರಾಧಾಕೃಷ್ಣ ವಿಖೆ ಪಾಟಿಲ್ ಅವರು ಬಂದ್‌ಗೆ ಬೆಂಬಲ ಘೋಷಿಸುವ ಮೂಲಕ ಈ ವಿವಾದ ರಾಜಕೀಯ ತಿರುವು ಸಹ ಪಡೆದುಕೊಂಡಿದೆ. ಈ ನಡುವೆ ಶಿವಸೇನೆ ಸಂಸದ ಸದಾಶಿವ ಲೋಖಾಂಡೆ ಅವರು ಸಿಎಂ ಜತೆ ಚರ್ಚಿಸಲು ಸಮಯಾವಕಾಶ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ