Belagavi NewsBelgaum NewsCrimeKannada NewsKarnataka NewsNationalPolitics

*ಜೂಜಾಟ ಅಡ್ಡದ ಮೇಲೆ ದಾಳಿ: 5 ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೂಜಾಟ ಅಡ್ಡೆ ಮೇಲೆ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ದಾಳಿ ಮಾಡಿ ಐದು ಜನ ಜೂಜುಕೋರರನ್ನು ಬಂಧಿಸಿದ್ದಾರೆ.

ವಿಶ್ವನಾಥ ರವಿ ಗೋಟಡಕಿ (28), ರವಿ ಮಹಾವೀರ ದಡ್ಡಿ (20), ಲಕ್ಷ್ಮಣ ಯಲ್ಲಪ್ಪ ಮಾಶಾನಕಟ್ಟಿ (49), ನಾಗಪ್ಪ ಸಿದ್ರಾಯಿ ನಾಯಿಕ (56) ಹಾಗೂ ಕಲ್ಲಪ್ಪ ಶೆಟ್ಟೆಪ್ಪ ಮಾಸ್ತಮರ್ಡಿ (50)  ಇವರೆಲ್ಲರೂ ಸೇರಿ ಹಲಗಾ ಗ್ರಾಮದ ವಿಜಯ ನಗರ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಹಣ ಕಟ್ಟಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾಗ ಹಿರೇಬಾಗೇವಾಡಿ ಠಾಣೆಯ ಪಿಐ ಸುಂದ್ರೇಶ ಕೆ. ಹೊಳೆನ್ನವರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿತರಿಂದ ರೂ.21,000 ಹಣ ಹಾಗೂ ಇಸ್ಪೀಟ ಎಲೆಗಳನ್ನು ಜಪ್ತಪಡಿಸಿ ಆರೋಪಿತರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.58/2026 ಕಲಂ. 87 ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.

Home add -Advt

Related Articles

Back to top button