Kannada NewsKarnataka NewsLatest

ಬರ್ಬರವಾಗಿ ತಂದೆ, ಮಗ ಮತ್ತು ತಾಯಿಯ ಹತ್ಯೆ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ -ಬೈಲಹೊಂಗಲ ತಾಲೂಕು ದೊಡವಾಡ ಗ್ರಾಮದಲ್ಲಿ ತ್ರಿವಳಿ ಕೊಲೆ ನಡೆದಿದೆ. ತಂದೆ ಮಗ ಮತ್ತು ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
 ಕಳೆದ ರಾತ್ರಿ ಅಪರಿಚಿತ ದುಷ್ಕರ್ಮಿಗಳಿಂದ ಈ ಭೀಕರ ಕೃತ್ಯ ನಡೆದಿದೆ. ತಾಲೂಕು ಪಂಚಾಯತಿ ಮಾಜಿ ಸದಸ್ಯ ಶಿವಾನಂದ ಅಂದಾನಶೆಟ್ಟಿ, ಹೆಂಡತಿ ಶಾಂತವ್ವಾ ಮತ್ತು ಪುತ್ರ ವಿನೋದ್ ಅಂದಾನಶೆಟ್ಟಿ ಕೊಲೆಯಾಗಿದ್ದಾರೆ.
ಒಂದೇ ಮನೆಯಲ್ಲಿ ಮೂರು ಜನರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಹಳೆ ದ್ವೇಷ ಹಿನ್ನೆಲೆಯಲ್ಲಿ  ಈ ಕೊಲೆ ನಡೆದಿರು ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button