CrimeKannada NewsKarnataka NewsLatest

*ಗ್ಯಾಸ್ ಸಿಲಿಂಡರ್ ಗೆ ಕೆವೈಸಿ ಅಪ್ ಡೇಟ್ ಹೆಸರಲ್ಲಿ ಲಕ್ಷ ಲಕ್ಷ ವಂಚಿಸಿದ ಸೈಬರ್ ವಂಚಕರು*

ಪ್ರಗತಿವಾಹಿನಿ ಸುದ್ದಿ: ಒಂದೆಡೆ ಎಲ್ ಪಿಜಿ ಸಿಲಿಂಡರ್ ಅಭಾವ, ಮತ್ತೊಂದೆಡೆ ಗ್ಯಾಸ್ ಬುಕ್ ಮಾಡಿದರೂ ಸಿಗದೇ ಪರದಾಡುವ ಸ್ಥಿತಿ. ಇಂತಹ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು ಗ್ಯಾಸ್ ಸಿಲಿಂಡರ್ ಗೆ ಕೆವೈಸಿ ಅಪ್ ಡೆಟ್ ಮಾಡಬೇಕು ಎಂದು ಕರೆ ಮಾಡಿ ಇಬ್ಬರಿಗೆ ಲಕ್ಷ ಲಕ್ಷ ರೂಪಾಯಿ ವಂಚಿಸಿದ್ದಾರೆ.

ಈ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಎಸ್ ಪಿ ಹರಿರಾಮ್ ಶಂಕರ್ ಈ ಬಗ್ಗೆ ಮಾಹಿತಿ ನೀಡಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಗ್ಯಾಸ್ ಏಜೆನ್ಸಿಯಿಂದ ಕರೆ ಮಾಡುತ್ತಿದ್ದೇವೆ. ಕೆವೈಸಿ ಅಪ್ ಡೇಟ್ ಮಾಡುವಂತೆ ಹೇಳಿ ಅಪರಿಚಿತ ನಂಬರ್ ನಿಂದ ಕರೆ ಮಾಡಿ ಬಳಿಕ ವಾಟ್ಸಾಪ್ ಗೆ ಎಪಿಕೆ ಫೈಲ್ ಕಳುಹಿಸಿ ಫೈಲ್ ಡೌನ್ ಲೋಡ್ ಮಾಡುವಂತೆ ಹೇಳಿದ್ದಾರೆ. ಹೀಗೆ ಡೌನ್ ಲೋಡ್ ಮಾಡುತ್ತಿದ್ದಂತೆ ಫೋನ್ ಹ್ಯಾಕ್ ಆಗಿದ್ದು, ವಂಚಕರು ಬ್ಯಾಂಕ್ ವಿವರಗಳನ್ನು ಪಡೆದು ಅಕೌಂಟ್ ನಲ್ಲಿದ್ದ ಹಣವನ್ನು ದೋಚಿಸದ್ದಾರೆ.

Home add -Advt

ಒಂದು ಪ್ರಕರಣದಲ್ಲಿ 1.5 ಲಕ್ಷ ವಂಚನೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಖಾತೆಯಲ್ಲಿದ್ದ 6 ಲಕ್ಷ ರೂಪಾಯಿ ದೋಚಲಾಗಿದೆ. ಬೇಗ ಸಿಲಿಂಡರ್ ಕೊಡುತ್ತೇವೆ. ಹಳೆಯ ರೇಟಿನಲ್ಲಿಯೇ ಸಿಲಿಂಡರ್ ನೀಡಲಾಗುವುದು ಎಂದು ನಕಲಿ ವೆಬ್ ಸೈಟ್ ಮೂಲಕ ವಂಚಿಸುತ್ತಿದ್ದಾರೆ. ಕೆವೈಸಿ ಬಗ್ಗೆ ಯಾವುದೇ ತರಾತುರಿ ಬೇಡ. ಸರ್ಕಾರ ಯಾವುದೇ ಹೊಸ ಆದೇಶ ಮಾಡಿಲ್ಲ. ಈ ಹಿಂದಿನ ಆದೇಶವೇ ಜಾರಿಯಲ್ಲಿದೆ. ಸಾರ್ವಜನಿಕರು ಜಾಗೃತಿ ವಹಿಸುವಂತೆ ಸೂಚಿಸಿದ್ದಾರೆ.


Related Articles

Back to top button