ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಸಾಹಿತ್ಯ ಕಲಾ ವೇದಿಕೆ ವತಿಯಿಂದ ಫೆಬ್ರುವರಿ ತಿಂಗಳ 16 ರಂದು ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ರಾಗ ರಂಜನಿ -2020 ರಸಮಯ ಸಂಗೀತ ಸಂಜೆ ಕನ್ನಡ ಗೀತೆಗಳ ಸ್ಪರ್ಧೆಗೆ ಇದೇ ತಿಂಗಳು 26 ರಂದು ಬೆಳಗಾವಿಯಲ್ಲಿ ಧ್ವನಿ ಪರೀಕ್ಷೆ ನಡೆಯಲಿದೆ .
ಬೆಳಗಾವಿ ನಗರದ ಟಿಳಕವಾಡಿಯಲ್ಲಿ ಇರುವ ಜಿ ಜಿ ಚಿಟ್ನಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಧ್ವನಿ ಪರೀಕ್ಷೆ ಬೆಳಗಿನ 10-30 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ನಡೆಯಲಿದೆ . ಇಪ್ಪತ್ತು ವರ್ಷ ಮೇಲ್ಪಟ್ಟ ಸ್ತ್ರೀ ಹಾಗೂ ಪುರುಷರು ಈ ಧ್ವನಿ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಮೂರು ನಿಮಿಷ ಅವಧಿಯ ಯಾವುದೇ ಭಾಷೆಯ ಗೀತೆಯನ್ನು ಹಾಡಬಹುದು.
ಧ್ವನಿ ಪರೀಕ್ಷೆಯಲ್ಲಿ ಪಾಸಾದವರು ಫೆಬ್ರುವರಿ ತಿಂಗಳ 16 ರಂದು ಬೆಳಗಾವಿಯಲ್ಲಿ ನಡೆಯುವ “ರಾಗ ರಂಜನಿ-2020 ಸಂಗೀತ ಸಂಜೆ ” ಕನ್ನಡ ಗೀತೆಗಳ ಸ್ಪರ್ಧೆಯಲ್ಲಿ ಭಾಗವಹಿಸಬಹುದು.ಈ ಸ್ಪರ್ಧೆಯಲ್ಲಿ ಕ್ರಮವಾಗಿ ವಿಜೇತರಾದವರಿಗೆ ಪ್ರಥಮ ರೂ.5,000 ದ್ವಿತೀಯ ರೂ.3,000 ಹಾಗೂ ತೃತೀಯ ರೂ.2,000 ಹಣವನ್ನು ಮತ್ತು ಪ್ರಮಾಣ ಪತ್ರವನ್ನು ಬಹುಮಾನವಾಗಿ ನೀಡಲಾಗುವುದು.
ಈ ಬಹುಮಾನವು ಸ್ತ್ರೀ ವಿಭಾಗಕ್ಕೆ ಮತ್ತು ಪುರುಷ ವಿಭಾಗಕ್ಕೆ ಪ್ರತ್ಯೇಕವಾಗಿ ನೀಡಲಾಗುವುದು. ಆಸಕ್ತಿ ಇದ್ದವರು ಮೊಬೈಲ್ ನಂಬರ್: 9611485264 ಹಾಗೂ 8951539180 ಸಂಪರ್ಕಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ