Kannada NewsKarnataka NewsLatest

*ಬಿಸಿಲ ಝಳ: ಕೆರೆಯಲ್ಲಿ ಈಜಲು ಹೋಗಿದ್ದ ಓರ್ವ ಶವವಾಗಿ ಪತ್ತೆ; ಇಬ್ಬರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಯುವಕರು ನದಿ, ಕೆರೆ, ಕೃಷಿ ಹೊಂಡಘಳಿಗೆ ಈಜಲು ಹೋಗುತ್ತಿದ್ದಾರೆ. ಹೀಗೆ ಈಜಲು ಹೋಗಿದ್ದ ಯುವಕನೊಬ್ಬ ಮೃಪಟ್ಟಿರುವ ಘಟನೆ ನಡೆದಿದೆ.

Home add -Advt

ಚಿಕ್ಕಮಗಳೂರಿನ ಎನ್​. ಆರ್. ಪುರ ತಾಲೂಕಿನ ಸಿದ್ದರಾಮಯ್ಯ ಸೇತುವೆ ಬಳಿ ಈಜಲು ತೆರಳಿ ಈ ದುರಂತ ಸಂಭವಿಸಿದೆ. ಮೃತ ಯುವಕನನ್ನು ನಿತಿನ್‌(34) ಎಂದು ಗುರುತಿಸಲಾಗಿದೆ.

ಮತ್ತೊಂದೆಡೆ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಕಾರ್ಮಿಕರು ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರಿನಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ರಮೇಶ್ (27) ಮಹೇಶ್ (34) ಎಂದು ಗುರುತಿಸಲಾಗಿದೆ. ಬಿಸಿಲಿನ ಧಗೆ ಹೆಚ್ಚು ಇದ್ದ ಕಾರಣ ಇಬ್ಬರು ಕಾರ್ಮಿಕರು ಈಜಲು ತೆರಳಿದ್ದರು. ನಾಪತ್ತೆಯಾದ ಬಳಿಕ ಕೃಷಿ ಹೊಂಡದ ಸಮೀಪ ಇಬ್ಬರ ಚಪ್ಪಲಿ ಪತ್ತೆಯಾಗಿದೆ.

ಇವರಿಬ್ಬರು ಕೊಪ್ಪ ತಾಲೂಕಿನ ಜಯಪುರ ಮೂಲದ ಕಾರ್ಮಿಕರು. ಬಿಳಗಿರಿ ಎಸ್ಟೇಟ್ ಬಳಿ ಇಬ್ಬರು ಕಾರ್ಮಿಕರು ಕೆಲ ದಿನಗಳಿಂದ ಕೆಲಸ ಮಾಡುತ್ತಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Related Articles

Back to top button