Belagavi NewsBelgaum NewsKannada NewsKarnataka News
*ಬೆಳಗಾವಿಯಲ್ಲಿ ಏ.27 ರಂದು ಉದ್ಯೋಗ ಮೇಳ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಏ. 27ರಂದು ಬೆಳಗ್ಗೆ 9.30 ರಿಂದ ಮದ್ಯಾಹ್ನ 2.30 ಗಂಟೆಯವರೆಗೆ ಗೋಕಾಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎಮ್ ಹೆಚ್ ಎಸ್ ಕ್ಯಾಂಪಸ್‌ನಲ್ಲಿ ಎಸ್.ಎಸ್.ಎಲ್.ಸಿ, ಐಟಿಐ,ಪಿಯುಸಿ, ಡಿಪ್ಲೋಮಾ ಹಾಗೂ ಪದವಿ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ “ಉದ್ಯೋಗ ಮೇಳ” ವನ್ನು ಆಯೋಜಿಸಲಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು https://tinyurl.com/yjc2suve ವೆಬ್‌ಸೈಟ್‌ನಲ್ಲಿ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ.
ಹೆಚ್ಚಿನ ಮಾಹಿತಿಗಳಿಗಾಗಿ ದೊರವಾಣಿ ಸಂಖ್ಯೆ 7975856566, 9980484528 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.




