LatestNationalPolitics

*ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಿಎಂ ಪುತ್ರಿ ಕೆ.ಕವಿತಾ*

ಪ್ರಗತಿವಾಹಿನಿ ಸುದ್ದಿ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ.

ಮೇಡ್ಚಲ್ ಜಿಲ್ಲೆಯ ಮುನಿರಾಆದ್ ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕೆ.ಕವಿತಾ ತೆಲಂಗಾಣ ರಾಷ್ಟ್ರ ಸೇನಾ (ಟಿಆರ್ ಎಸ್) ಪಕ್ಷ ಎಂಬ ನೂತನ ರಾಜಕೀಯ ಪಕ್ಷ ಘೋಷಿಸಿದ್ದಾರೆ. ಈ ಮೂಲಕ ತಂದೆ ಕೆ ಸಿಆರ್ ಹಾಗೂ ಸಹೋದರ ಕೆ.ಟಿ.ರಾಮರಾವ್ ಅವರಿಗೆ ಸೆಡ್ಡು ಹೊಡೆದಿದ್ದಾರೆ.

ದೆಹಲಿಯ ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಜೈಲು ಸೇರಿದ್ದ ಕವಿತಾ, ಕ್ಲೀನ್ ಚಿಟ್ ಪಡೆದು ಬಿಡುಗಡೆಯಾಗಿ ಬಂದಿದ್ದರು. ಪಕ್ಷದ ವಿಚಾರವಾಗಿ ತಂದೆ ಹಾಗೂ ಸಹೋದರನ ನಡುವೆ ಕಲಹ ಉಂಟಾಗಿತ್ತು.ಇದರಿಂದ ಬಿಆರ್ ಎಸ್ ಪಕ್ಷದಿಂದ ಹೊರ ಬಂದಿದ್ದ ಕವಿತಾ ತಮ್ಮದೇ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧಿಸಿದ್ದರು. ಇಂದು ತೆಲಂಗಾಣ ರಾಷ್ಟ್ರೀಯ ಸೇನಾ ಪಕ್ಷ ಘೋಷಿಸಿವ ಮೂಲಕ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಉದಯವಾಗಿದೆ.

Home add -Advt

Related Articles

Back to top button