ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಸುಮಾರು 100 ಎಕರೆ ಜಮೀನಿಗೆ ನೀರುಣಿಸುವ ಏತ ನೀರಾವರಿ ಯೋಜನೆಯನ್ನು ಶಾಸಕ ಗಣೇಶ ಹುಕ್ಕೇರಿ ಬುಧವಾರ ರೈತರಿಗೆ ಅರ್ಪಿಸಿದರು.
ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಪಟ್ಟಣಕುಡಿ ಗ್ರಾಮಕ್ಕೆ ಹಾಲಸಿದ್ದನಾಥ ಏತ ನಿರಾವರಿ ಯೋಜನೆ ಮಂಜೂರಾಗಿದೆ.
ಸುಮಾರು 13 ಕಿಮೀ ಪೈಪ್ ಲೈನ್ ಅಳವಡಿಸಲಾಗಿದ್ದು, 60 ರೈತರ 100 ಎಕರೆಗಳಷ್ಟು ಪ್ರದೇಶ ನೀರಾವರಿಗೆ ಒಳಪಡಲಿದೆ.
ಚಿಕ್ಕೋಡಿ -ಸದಲಗಾ ಕ್ಷೇತ್ರದ ಬಹುತೇಕ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸಲಾಗಿದೆ. ಉಳಿದವುಗಳನ್ನು ಸಹ ಅತೀ ಶೀಘ್ರದಲ್ಲಿ ನೀರಾವರಿ ಮಾಡಲಾಗುವುದು. ಜಮೀನು ನೀರಾವರಿಯಾದರೆ ರೈತರು ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗಲಿದೆ. ಹಾಗಾಗಿ ಹಿಂದಿನಿಂದಲೂ ನೀರಾವರಿಗೆ ಕ್ಷೇತ್ರದಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಗಣೇಶ ಹುಕ್ಕೇರಿ ತಿಳಿಸಿದರು.
ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ಸ್ಥಳೀಯ ಜನಪ್ರತಿನಿಧಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ