Karnataka NewsLatest

*ಸಾಂಬಾರ್ ಮಾಡಿಲ್ಲ ಎಂದು ತಂದೆ ಮಗಳಿಗೆ ಬೈದಿದ್ದೇ ತಪ್ಪಾಯ್ತು: ನೊಂದು ಆತ್ಮಹತ್ಯೆಗೆ ಶರಣಾದ ಯುವತಿ*

ಪ್ರಗತಿವಾಹಿನಿ ಸುದ್ದಿ: ಈಗಿನ ಕಾಲದಲ್ಲಿ ಮಕ್ಕಳಿಗೆ ಸ್ವಲ್ಪ ಬೈದು ಬುದ್ಧಿಹೇಳುವಂತಿಲ್ಲ. ಅದನ್ನೇ ದೊಡ್ದದು ಮಾಡಿ ಅವಮಾನವಾಯಿತೆಂದು ನೊಂದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಂಡುಬಿಡುತ್ತಾರೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದೆ.

ಹೇಳಿದರೂ ಊಟಕ್ಕೆ ಸಾಂಬಾರ್ ಮಾಡಿಲ್ಲ ಎಂದು ತಂದೆ ಬೈದಿದ್ದಕ್ಕೆ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳುರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ (22) ಆತ್ಮಹತ್ಯೆಗೆ ಶರಣಾದ ಯುವತಿ.

ನಿನ್ನೆ ಸೌಜನ್ಯ ತಂದೆ ನಟೇಶ್, ಮಗಳಿಗೆ ತರಕಾರಿ ತಂದು ಸಾಂಬಾರ್ ಮಾಡಲು ಹೇಳಿದ್ದರಂತೆ. ಮಧ್ಯಾಹ್ನ ತಂದೆ ಊಟಕ್ಕೆ ಬಂದಾಗ ಮಗಳು ಸಾಂಬಾರ್ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ತಂದೆ ಮಗಳಿಗೆ ಬೈದಿದ್ದಾರೆ. ಊಟಕ್ಕೆ ಬಂದರೂ ಇನ್ನೂ ಸಾಂಬಾರ್ ಮಾಡಿಲ್ಲ ಎಂದು ನಲಕು ಮಾತು ಗದರಿದ್ದಾರೆ.

ಬಳಿಕ ನಟೇಶ್ ಪಕ್ಕದ ಮನೆಗೆ ಸಾಂಬಾರ್ ತರಲೆಂದು ಹೋಗಿದ್ದಾರೆ. ತಂದೆ ಬೈದಿದ್ದಕ್ಕೆ ತೀವ್ರವಗೈ ಮನನೊಂದಿದ್ದ ಸೌಜನ್ಯ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿಇದ್ದಾಳೆ. ತಂದೆ ಮನೆಗೆ ಬಂದು ನೋಡುವಷ್ಟರಲ್ಲಿ ಮಗಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Home add -Advt

Related Articles

Back to top button