Belagavi NewsBelgaum NewsKannada NewsKarnataka NewsLatest
*BREAKING: ಬೆಳಗಾವಿ: ವಕೀಲೆಯ ಮನೆ ಮೇಲೆ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರದಲ್ಲಿ ವಕೀಲೆಯೊಬ್ಬರ ಮನೆ ಮೇಲೆ ದುಷ್ಕರ್ಮಿಗಳು ಗುಂದಿನ ದಾಳಿ ನಡೆಸಿರುವ ಘಟನೆ ನಡೆದಿದೆ.
ಬೆಳಗಾವಿ ನಗರದ ಮಂಡೋಳಿ ರಸ್ತೆಯಲ್ಲಿರುವ ಪೂಜಾ ಕಾಕತಕರ್ ಎಂಬ ವಕೀಲೆಯ ಮನೆಯ ಮೊದಲ ಮಹಡಿ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದು, ಕಿಡಕಿ ಗಾಜುಗಳು ಪುಡಿಯಾಗಿವೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.
ವಕೀಲೆ ಮಗಳು ರಾತ್ರಿ ಮನೆಯ ಮೊದಲ ಮಹಡಿಯಲ್ಲಿ ಓದುತ್ತಾ ಕುಳಿತಿದ್ದಳು. ತಡ ರಾತ್ರುಯಾದ್ದರಿಂದ ಕೆಳಗೆ ಬರುವಂತೆ ಪೋಷಕರು ಕರೆದಿದ್ದಾರೆ. ಮಗಳು ಕೆಳಗೆ ಬಂದ ಕೆಲ ಸಮಯದಲ್ಲೇ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ.
ವಕೀಲೆ ಪೂಜಾ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಎಫ್ ಎಸ್ ಎಲ್ ತಂಡ, ಗುಂಡನ್ನು ವಶಕ್ಕೆ ಪಡೆದಿವೆ. ತನಿಖೆ ಚುರುಕುಗೊಂಡಿದೆ.



