Belagavi NewsBelgaum NewsKarnataka NewsLatestPolitics

*ಬೆಳಗಾವಿಯಲ್ಲಿ ಸಂಭ್ರಮ ಸಡಗರ ಬಸವ ಜಯಂತಿ ಮೆರವಣಿಗೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ನಿಮಿತ್ತ ಏರ್ಪಡಿಸಲಾಗಿದ್ದ ಭವ್ಯ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು.


ಬೆಳಗಾವಿಯ ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾ ಸ್ವಾಮೀಜಿಯವರು,ಕಾರಂಜಿ ಮಠದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಜಿಯವರು, ಮಾಡಿ ಹಂದಿಗುಂದದ ಶ್ರೀ. ಶಿವಾನಂದ ಸ್ವಾಮೀಜಿ, ನಿಷ್ಪಲ್, ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ಕಿತ್ತೂರು ಕಲ್ಮಠ ದ ಶ್ರೀ ಮಡಿವಾಳ ರಾಜ ಯೋಗಿಂದ್ರ ಮಹಾಸ್ವಾಮಿಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಸೇರಿದಂತೆ ವಿವಿಧ ಮಠಾಧೀಶರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಕೆಎಲ್ಇ ಗೌರವ ಕಾರ್ಯಧ್ಯಕ್ಷ ಡಾ. ಪ್ರಭಾಕರ್ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಶಾಸಕ ಮಹಾಂತೇಶ್ ದೊಡ ಗೌಡರ,ಬಸವ ಜಯಂತಿ ಉತ್ಸವ ಸಮಿತಿಯ ಮುಖ್ಯ ಸಂಚಾಲಕ ಬಸವರಾಜ ರೊಟ್ಟಿ, ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ್, ಶಾಸಕ ಅಸಿಫ್ ಶೆಟ್, ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಲಿ, ಮಾಜಿ ಸಂಸದ ಮಂಗಲಾ ಅಂಗಡಿ, ಮಾಜಿ ಸಚಿವ ಎ.ಬಿ.ಪಾಟೀಲ್, ಸೇರಿದಂತೆ ಹಲವಾರು ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.


ಶಾಸಕ ಬಾಬಾ ಸಾಹೇಬ್ ಪಾಟೀಲ್ , ಡಾ.ಎಚ್ .ಬಿ. ರಾಜಶೇಖರ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ,ಮಾಜಿ ಶಾಸಕ ವಿ ಐ ಪಾಟೀಲ್, ಮಾಜಿ ಶಾಸಕ ಅನಿಲ್ ಬೆನಕೆ, ಹಲವಾರು ನಗರಸೇವಕರುಗಳು ಉಪಸ್ಥಿತರಿದ್ದರು.

Home add -Advt


ಜಿಲ್ಲೆಯ ವಿವಿಧ ತಾಲೂಕುಗಳು ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾವಿರಾರು ಬಸವಭಕ್ತರು ಸೇರಿದ್ದ ಈ ಮೆರವಣಿಗೆಯಲ್ಲಿ ವಚನ ಕಟ್ಟುಗಳನ್ನು ಪಲ್ಲಕ್ಕಿ ಮೆರವಣಿಗೆಯ ಮುಂಚೂಣಿಯಲ್ಲಿತ್ತು, ಉಡುಪಿಯಿಂದ ಬಂದಿದ್ದ ಚಂಡೇ ಮದ್ದಳೆ ತಂಡ, 16 ಅಡಿ ಎತ್ತರದ ಭವ್ಯ ಬಸವಣ್ಣನವರ ಮೂರ್ತಿ, ಎರಡು ಝಾಂಜ ಪಥಕಗಳು, ಬಸವಣ್ಣನವರ ಮೂರ್ತಿಯನ್ನು ಹೊತ್ತ ಡಿಜಿಟಲ್ ಆನೆ, ಆಕರ್ಷಕ ನೃತ್ಯ ಪ್ರದರ್ಶನ ನೀಡುತ್ತಿದ್ದ ಶಿವಶರಣೆಯರ ತಂಡ, ಸೌಂಡ್ ಸಿಸ್ಟಮ್ಸ್ ತಂಡ, ಒಂದು ಭವ್ಯವಾದ ಟ್ಯಾಬ್ಲೋ, ದಾವಣಗೆರೆಯ ಭಜನಾ ಮಂಡಳಿ, ಇದಾದ ನಂತರ ಮತ್ತೊಂದು ರೂಪಕ ವಾಹನ, ಆಕರ್ಷಕ ಕೋಲಾಟ ಪ್ರದರ್ಶನ ನೀಡುತ್ತಿದ್ದ ತಂಡ, ಮತ್ತೊಂದು ಝಾಂಜ ಪಥಕ, ಎಸ್ ಜಿ ಬಿ ಐ ಟಿ ಕಾಲೇಜಿನ ರೂಪಕ ವಾಹನ ಹಾಗೂ ಇನ್ನಿತರ ಹಲವಾರು ರೂಪಕ ವಾಹನಗಳು ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು.


ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆಯು ಕಾಕತಿ ವೇಸ್ ಮೂಲಕ ಹಾಯ್ದು ಶನಿವಾರ ಖೂಟ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರೋಡ್ ಮೂಲಕ ಸಾಗಿ ಲಿಂಗರಾಜ್ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಂಡಿತು. ಅಲ್ಲಿ ಅಕರ್ಷಕ ಕ್ರ್ಯಾಕರ್ ಮತ್ತು ಸಿಡಿಮದ್ದು ಪ್ರದರ್ಶನವನ್ನು ಅಲ್ಲಿ ಸೇರಿದ್ದ ಸಾವಿರಾರು ಬಸವಾನುಯಾಯಿಗಳು ಕಣ್ತುಂಬಿಕೊಂಡರು.


ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಗೌರವಾಧ್ಯಕ್ಷ ರಮೇಶ್ ಚೌಗುಲಾ ಮತ್ತು ಅಧ್ಯಕ್ಷ ಜಗದೀಶ್ ಪೂಜಾರಿ ಅವರುಗಳ ನೇತೃತ್ವದಲ್ಲಿ ನೂರಾರು ಸದಸ್ಯರು ಮೆರವಣಿಗೆ ಉದ್ದಕ್ಕೂ ಮೆರವಣಿಗೆಯ ಎಲ್ಲ ವ್ಯವಸ್ಥೆಗಳನ್ನು ಶಿಸ್ತು ಬದ್ಧವಾಗಿ ಯಾವುದೇ ರೀತಿಯ ಅಹಿತಗರ ಘಟನೆ ನಡೆಯದಂತೆ ನೋಡಿಕೊಂಡರು. ಮೆರವಣಿಗೆಯುದ್ಧಕ್ಕೂ ಬಸವಣ್ಣನವರ ಕುರಿತ ಜೈ ಜೈಕಾರ, ಬಸವಾದಿ ಶರಣರ ಕುರಿತು ಜೈ ಜೈಕಾರ ಮತ್ತು ವಚನಗಳ ಪಠಣ ನಡೆದಿತ್ತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಬಸವಾನುಯಾಯಿಗಳಿಗೆ ಲಿಂಗರಾಜ್ ಕಾಲೇಜ್ ಆವರಣದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Related Articles

Back to top button