CrimeKannada NewsKarnataka NewsLatest

*ಗೃಹ ಸಚಿವ ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ವಂಚನೆ: ಆರೋಪಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ*

ಪ್ರಗತಿವಾಹಿನಿ ಸುದ್ದಿ: ಅಮಿತ್ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಗೆ 2.70 ಕೋಟಿ ವಂಚನೆಯೆಸಗಿದ್ದ ಆರೋಪಿ ಸುಜಯೇಂದ್ರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ವೈದ್ಯನಿಗೆ ವಂಚಿಸಿದ ಆರೋಪದಲ್ಲಿ ಬೆಂಗಳೂರಿನ 24ನೇ ಎಸಿಜೆಎಂ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಯದುಗಿರಿ ಯತಿರಾಜ ಮಠದ ಸ್ವಾಮೀಜಿ ಆತ್ಮೀಯತೆ ಗಳಿಸಿದ್ದ ಆರೋಪಿ, ಮಠಕ್ಕೆ ಧನಸಹಾಯ ಮಾಡಿಕೊಂಡು ಹತ್ತಿರವಾಗಿದ್ದ. ಬಳಿಕ ದೇಶಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅಲ್ಲಿ ರಾಜಕಾರಣಿಗಳ ಜೊತೆಗಿನ ಫೋಟೋ ಇಟ್ಟುಕೊಂಡು ವಂಚನೆಗೆ ಇಳಿದಿದ್ದ.

2023ರಲ್ಲಿ ಏರ್​ಪೋರ್ಟ್​ ಬಳಿ ಜಮೀನು ಕೊಡಿಸುವುದಾಗಿ ಹೆಳಿ ಜಮ್ಮು-ಕಾಶ್ಮೀರ ಮೂಲದ ವೈದ್ಯನಿಗೆ ವಂಚನೆ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿ‌ ವಿರುದ್ಧ ವಿಜಯನಗರ ಠಾಣೆಯಲ್ಲಿ‌ ಎಫ್​ಐಆರ್ ದಾಖಲಾಗಿತ್ತು.

ವೈದ್ಯರಾಗಿರುವ ಡಾ.ರಾಜಾ ಲಂಗೇರ್‌ ಕೂಡ ಮಠದ ಭಕ್ತರಾಗಿದ್ದು, ಇದೇ ಮಠದಲ್ಲಿ ಅವರಿಗೆ ಆರೋಪಿ ಸುಜಯೇಂದ್ರನ ಪರಿಚಯವಾಗಿತ್ತು. ಗೃಹ ಸಚಿವ ಅಮಿತ್‌ ಶಾ ಅವರ ವಿಶೇಷ ಕರ್ತವ್ಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಈ ನಡುವೆ ಬೆಂಗಳೂರಿನ ಏರ್​​ಪೋರ್ಟ್​​ ಬಳಿ ಮಠಕ್ಕೆ ಸೇರಿರುವ ಜಮೀನಿದ್ದು, ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಅಲ್ಲದೆ ಸ್ವಾಮೀಜಿ ಕೂಡ ತನ್ನ ಮಾತಿಗೆ ಒಪ್ಪುತ್ತಾರೆ ಎಂದು ಹೇಳಿದ್ದ. ಈತನ ಮೋಸ ಅರಿಯದ ವೈದ್ಯ ಡಾ.ರಾಜಾ ಲಂಗೇರ್‌ ಒಟ್ಟು 2.70 ಕೋಟಿ ರೂಪಾಯಿಗಳನ್ನು ಆರೋಪಿಗೆ ನೀಡಿದ್ದರು. ಆದರೆ ಸುಜಯೇಂದ್ರ ಹೇಳಿದಂತೆ ಜಮೀನು ಕೊಡಿಸದಾಗ ಅನುಮಾನಗೊಂಡು ಆತನ ಬಗ್ಗೆ ವಿಚಾರಿಸಿದಾದ ಆತ ಅಮಿತ್ ಶಾ ಅವರ ವಿಶೇಷ ಕರ್ತವ್ಯಧಿಕಾರಿ ಅಲ್ಲ. ವಂಚಕ ಎಂಬುದು ಬೆಳಕಿಗೆ ಬಂದಿತ್ತು.

Home add -Advt

ಇದೇ ಸುಜಯೇಂದ್ರನ ವಿರುದ್ಧ ರಾಜ್ಯಪಾಲರ ನಕಲಿ ಸಹಿ ಮತ್ತು ಲೋಕಭವನದ ಅಧಿಕೃತ ಲೆಟರ್ ಹೆಡ್ ಅನ್ನು ಬಳಸಿಕೊಂಡು ವಂಚನೆ ಎಸಗಿರುವ ಆರೋಪವೂ ಕೇಳಿಬಂದಿತ್ತು.


Related Articles

Back to top button