Kannada NewsKarnataka NewsPolitics

*ದೇಶದ ಭವಿಷ್ಯ ವಿದ್ಯಾಕೇಂದ್ರಗಳಲ್ಲಿದೆ: ಬಸವರಾಜ ಬೊಮ್ಮಾಯಿ*

ಕೊಪ್ಪಳ ವಿದ್ಯಾಕಾಶಿಯಾಗಿ ವಿಶ್ವದಲ್ಲಿ ಬೆಳಗುವಂತಾಗಲಿ

ಪ್ರಗತಿವಾಹಿನಿ ಸುದ್ದಿ: ದೇಶದ ಭವಿಷ್ಯ ವಿದ್ಯಾಕೇಂದ್ರಗಳಲ್ಲಿದೆ. ಗವಿಸಿದ್ದೇಶ್ವರ ಮಠದ ಸ್ವಾಮೀಜಿಗಳು ಅಂತಕರಣದಿಂದ ಸುಮಾರು 1500 ವಿದ್ಯಾರ್ಥಿನಿಯರಿಗೆ ಜ್ಞಾನದ ಜೊತೆಗೆ ಸಂಸ್ಕಾರ ನೀಡುತ್ತಿದ್ದು, ಕೊಪ್ಪಳ ವಿದ್ಯಾಕಾಶಿಯಾಗಿ ವಿಶ್ವದಲ್ಲಿ ಬೆಳಗುವಂತಾಗಲಿ ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಕೊಪ್ಪಳದ ಕೋಳೂರು – ಕಾಟ್ರಳ್ಳಿ ಗ್ರಾಮದಲ್ಲಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜಿನ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು. 

ಒಂದು ಕಾಲ ಇತ್ತು ಯಾರ ಬಳಿ ಭೂಮಿ ಇತ್ತು ಅವರು ಜಗತ್ತು ಆಳುತ್ತಿದ್ದರು. ಅದಕ್ಕೆ ನಮ್ಮ ರಾಜಮಹಾರಾಜರು ಭೂಮಿಗಾಗಿ ಯುದ್ಧ ಮಾಡುತ್ತಿದ್ದರು. ಮತ್ತೊಂದು  ಕಾಲ ಯಾರ ಬಳಿ ದುಡ್ಡಿದೆ. ಅವರು ಜಗತ್ತು ಆಳುತ್ತಿದ್ದರು. ಕರ್ನಾಟಕಕ್ಕಿಂತ ಚಿಕ್ಕದಿರುವ ಇಂಗ್ಲೆಂಡ್ 139 ದೇಶಗಳನ್ನು ಆಳಿದರು. ಆದರೆ, 21 ನೇ ಶತಮಾನ ದುಡ್ಡಿದ್ದವರು,  ಹಣ ಇದ್ದವರದಲ್ಲ ಯಾರ ಬಳಿ ಜ್ಞಾನ ಇದೆ ಅವರು ಜಗತ್ತನ್ನು ಆಳುತ್ತಾರೆ. ಅಮೇರಿಕಾದ ಅಧ್ಯಕ್ಷರು ನಮಗೆ ಬಹಳ ಮುಖ್ಯ. ಆದರೆ, ಅಮೇರಿಕನ್ನರಿಗೆ ಎಲಾನ್ ಮಸ್ಕ್ ಬಹಳ ಮುಖ್ಯ. ಯಾವುದಾದರೂ ಪ್ರಧಾನಿ ಮೊದಲು ಭಾರತಕ್ಕೆ ಬಂದರೆ ದೆಹಲಿಗೆ ಬರುತ್ತಿದ್ದರು. ಈಗ ಬೆಂಗಳೂರಿಗೆ ಬರುತ್ತಾರೆ. ಯಾಕೆಂದರೆ ಅಲ್ಲಿ ಇನ್ಪೊಸಿಸ್ ನಂತಹ ಜ್ಞಾನದ ಕೇಂದ್ರಗಳಿವೆ. ಆದ್ದರಿಂದ ಈ ಕೇಂದ್ರ ಜ್ಞಾನದ ಶಕ್ತಿ ಕೇಂದ್ರ ಆಗಬೇಕೇಂದು ಸ್ವಾಮೀಜಿ ಇದನ್ನು ಮಾಡಿದ್ದಾರೆ ಎಂದರು.

Home add -Advt

ಸಂಕಷ್ಟ ಬಂದಾಗ ಮನುಷ್ಯ ತನ್ನ ಸಾಹಸ ಮಾಡುತ್ತಾನೆ. ಸಂಕಷ್ಟದಲ್ಲಿ ಸಕಾರಾತ್ಮಕ ಚಿಂತನೆ ಮಾಡುತ್ತಾನೆ. ಪರಮಪೂಜ್ಯರು ಕೊವಿಡ್ ಸಂದರ್ಭದಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಕಡು ಬಡವರು ಬಂದು ಆಶ್ರಯ ಕೇಳಿದಾಗ ಅನ್ನ ಕೊಡುತ್ತೇನೆ. ಆದರೆ, ಆಶಯ ಕೊಡುವುದು ಕಷ್ಟ ಎಂದು ನೋವಿನಿಂದ ಹೇಳಿದಾಗ ಎಲ್ಲರೂ ಬಂದು ಸ್ವಾಮೀಜಿಗಳ ಮಾತಿನಿಂದ ನಮಗೆ ಬಹಳಷ್ಟು ನೋವಾಗಿದೆ. ಅದಕ್ಕೆ ಏನಾದರೂ ಪರಿಹಾರ ಮಾಡಬೇಕು ಅಂತ ಹೇಳಿದರು. ಒಳ್ಳೆಯ ಕೆಲಸವನ್ನು ತಡ ಮಾಡದೇ ಮಾಡಬೇಕು. ಅಲ್ಪಸ್ವಲ್ಪ ಸುಮಾರು ಕೆಲಸವನ್ನು ಮುಂದೂಡುತ್ತ ಹೋಗಬೇಕು. ಒಳ್ಳೆಯ ಕೆಲಸಕ್ಕೆ ಸಮಯ ಹೋದರೆ ಮತ್ತೆ ಆ ಕೆಲಸ ಮಾಡಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ನಾನು ಒಂದು ಸಣ್ಣ ಸಹಾಯ ಮಾಡಿದೆ. ಆ ಒಂದು ಸಣ್ಣ ಸಹಾಯ ಇವತ್ತು ಅಭೂತಪೂರ್ವ ಸಂಸ್ಥೆಯಾಗಿ ಬೆಳೆದಿದೆ ಎಂದರು. 

ಸಂಸ್ಕಾರ ಸಂಸ್ಕೃತಿ ಮುಖ್ಯ

ನಮ್ಮ ಭಾರತದ ಭವಿಷ್ಯ ಕರ್ನಾಟಕದ ಭವಿಷ್ಯ ವಿದ್ಯಾಕೇಂದ್ರಗಳಲ್ಲಿ ಇದೆ. ಆದರಲ್ಲೂ ಗವಿ ಸಿದ್ದೇಶ್ವರ

ಮಠದ ಪರಮಪೂಜ್ಯರ ವಿಶೇಷತೆ ಏನು ಎಂದರೆ ಜ್ಞಾನವನ್ನೂ ಕೊಡುತ್ತಾರೆ. ವಿದ್ಯೆಯನ್ನೂ ಕೊಡುತ್ತಾರೆ. ಅದರ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಕೊಡುತ್ತಾರೆ. ಸಂಸ್ಕಾರ ಸಂಸ್ಕೃತಿ ಇಲ್ಲದ ಮನುಷ್ಯ ಜನ್ಮ ಜನ್ಮವೇ ಅಲ್ಲ. ಬಹಳಷ್ಟು ಜನರಿಗೆ ಸಂಸ್ಕಾರ ಮತ್ತು ಸಂಸ್ಕೃತಿ ನಡುವೆ ವ್ಯತ್ಯಾಸ ಗೊತ್ತಿಲ್ಲ. ನಮ್ಮ ಬಳಿ ಏನಿದೆಯೋ ಅದು ನಾಗರಿಕತೆ ಮೊದಲು ಬೀಸಿಕಲ್ಲು ಇತ್ತು. ಈಗ ಮಿಕ್ಸಿ. ಫ್ಯಾನ್, ಕಾರು, ವಿಮಾನ ಬಂದಿದೆ. ನಾಗರಿಕತೆ ಬೆಳೆದಿದೆ. ನಾವು ಏನಾಗಿದ್ದೇವೆ ಅನ್ನುವುದು ಸಂಸ್ಕಾರ. ನಾವು ಎಷ್ಟು ಮನುಷ್ಯತ್ವ ಇಟ್ಟುಕೊಂಡಿದ್ದೇವೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕು ಅಂದರೆ ಗವಿಸಿದ್ದೇಶ್ವರ ಮಠಕ್ಕೆ ಬರಬೇಕು. ನಮ್ಮ ಕರ್ನಾಟಕ ವಿಶ್ವ ವಿದ್ಯಾಲಯದ ಮುಖ್ಯ ಉದ್ದೇಶ ಆರಿವೆ ಗುರು ಅಂತ ಇದೆ. ಗವಿಸಿದ್ದೇಶ್ವರ ಮಠದ ಗುರುಗಳು ನಮ್ಮೆಲ್ಲರ ಆರಿವು ಆಗಿದ್ದಾರೆ. ಅರಿವನ್ನು ಪರಿಚಯ ಮಾಡಿಸುವ ಶಕ್ತಿ ಗುರುಗಳಿಗೆ ಇದೆ. ಅಮೂಲ್ಯವಾದ ಮೂಲಭೂತ ಬದಲಾವಣೆಯನ್ನು ಯಾವುದೇ ಸಂಸ್ಥೆ, ದೇಶ ಮಾಡಿಲ್ಲ. ಐಸಾಕ್ ನ್ಯೂಟನ್, ಥಾಮಸ್,  ಅಲ್ವಾ ಎಡಿಸನ್ ಅವರೆಲ್ಲ ವ್ಯಕ್ತಿಯಾಗಿ ಸಾಧನೆ ಮಾಡಿದ್ದಾರೆ. 

ಅದೇ ರೀತಿ ಬುದ್ದ ಬಸವ ಎಲ್ಲರೂ ಸೇರಿ ಮಾಡದಿರುವುದುನ್ನು ಒಬ್ಬ ವ್ಯಕ್ತಿ ಮಾಡಲು ಹೇಗೆ ಸಾಧ್ಯ ಎಲ್ಲರೂ ಸೇರಿ ಮಾಡುವುದು ಕ್ರಾಂತಿ ಆ ಕ್ರಾಂತಿ ಎಲ್ಲಿವರೆಗೂ ಏಕಾಗ್ರತೆಯಿಂದ ಚಿಂತನೆ ಮಾಡುತ್ತದೆ ಅಲ್ಲಿವೆರೆಗೂ ಯಶಸ್ವಿಯಾಗುತ್ತದೆ. ಆ ಸಾಧನೆ ಪಾಲನೆ ಮಾಡಿಕೊಂಡು ಹೋಗುವಾಗ ನಮ್ಮ ನಡುವೆ ವ್ಯತ್ಯಾಸಗಳು ಬರುತ್ತವೆ. ಅದಕ್ಕೆ ಉದಾಹರಣೆ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರೂ ಕೂಡಿ ಹೋಗಿದ್ದೇವು. 

ಸ್ವಾತಂತ್ರ್ಯ ಬಂದ ಮೇಲೆ ಬೇರೆ ಬೇರೆ ಆಲೋಚನೆ ಮಾಡಿದೆವು. ಒಬ್ಬ ವ್ಯಕ್ತಿ ಏಕಾಗ್ರತೆಯಿಂದ ಗುರಿಯನ್ನು ಸಾಧನೆ ಮಾಡಲು ಹೊರಟಾಗ ಅದರಲ್ಲಿ ಯಾವುದೇ ರೀತಿಯ ಬೇಧ ಭಾವ ಇರುವುದಿಲ್ಲ. ಗುರುಗಳು 2021-22 ರಿಂದ ಪ್ರಾರಂಭವಾಗಿರುವ ಈ ಸಂಸ್ಥೆ ಕಟ್ಟುವಲಿ ಎಕಾಗ್ರತೆ ಮತ್ತು ಗುರಿ ಇತ್ತು ಅದಕ್ಕಾಗಿ ಈ ಸಾಧನೆ ಆಗಿದೆ. ಕನಸು ಗುರಿ ಇರಬೇಕು. ಅದರ ಜೊತೆ ಸಂಕಲ್ಪ ಇರಬೇಕು. ಆ ಸಂಕಲ್ಪ ಇದ್ದಾಗ ಗುರಿ ಮುಟ್ಟಲು ಸಾಧ್ಯ ಇದೆ ಎಂದರು.

ಸಾಧಕರಿಗೆ ಸಾವಿಲ್ಲ

ಜೀವನದಲ್ಲಿ ಎರಡು ಬಹಳ ಕಠಿಣವಾಗಿರುವ ಕೆಲಸ, ನಾವು ಚಿಕ್ಕವರಿದ್ದಾಗ ನಮ್ಮ ಫೋಟೊ ಬಹಳ ಮುದ್ದಾಗಿರುತ್ತವೆ. ಈಗ ಅಕ್ರಾಳ ವಿಕ್ರಾಳ ಇರುತ್ತವೆ. ಹುಟ್ಟಿದಾಗ ಇದ್ದಾಗ ಮುಗ್ಧತೆಯನ್ನು ಕೊನೆವರೆಗೂ ಇಟ್ಟುಕೊಳ್ಳುವುದು ಬಹಳ ಕಷ್ಟ ಆದು ನಮ್ಮ ಪರಮಪೂಜ್ಯರಲ್ಲಿ ಇದೆ. ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಬಹಳ ಕಷ್ಟ ಆತ್ಮಸಾಕ್ಷಿಯನ್ನು ಗಟ್ಟಿಯಾಗಿ ಇಟ್ಟುಕೊಂಡು ಹೋಗಿರುವುದಕ್ಕೆ ಪರಪೂಜ್ಯರನ್ನು ಎಲ್ಲರೂ ಪೂಜಿಸುತ್ತಾರೆ. ನನ್ನದೇ ಆದ ರೀತಿಯಲ್ಲಿ ನಾನು ಜೀವನ ಮಾಡುತ್ತೇನೆ. ಯಾವುದೇ ಹೊಂದಾಣಿಕೆ ಇಲ್ಲ ಅಂತ ನಡೆದುಕೊಳ್ಳುತ್ತಾರೆ. ಅದೇ ಆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. 

ನನಗೆ ಬಹಳ ಸಂತೋಷ ಆಗಿರುವುದು ಹೆಣ್ಣು ಮಕ್ಕಳಿಗೆ ಈ ಕೇಂದ್ರ ಮಾಡಿರುವುದು ಬಹಳ ಸಂತಸವಾಗಿದೆ. ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಮುಂದೆ ಬಂದಿದ್ದಾರೆ. ಸ್ಟೇಷ್ ಟೆಕ್ನಾಲಜಿಯಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟೋಲ್ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಇರುವ ನೈಸರ್ಗಿಕ ಅಡೆತಡೆಗಳನ್ನು ಮೀರಿ ಮುಂದೆ ಬಂದಿದ್ದಾರೆ. 

ಸುಮಾರು 1500 ಭವಿಷ್ಯದ ಸಾಧಕರನ್ನು ಗುರುತಿಸಿ ಅನ್ನ, ಅಕ್ಷರ ಕೊಡುವ ಕೆಲಸ ತಾವು ಮಾಡುತ್ತಿದ್ದೀರಿ. ಇದರ ಮುಂದೆ ನಾವು ಏನೇ ಸಹಾಯ ಮಾಡುತ್ತೇವೆ ಎಂದರೆ ತಪ್ಪಾಗುತ್ತದೆ. ಇದು ಪಿಯುಸಿಯಿಂದ ಡಿಗ್ರಿ ಕಾಲೇಜ್ ಆಗಿ. ಡಿಗ್ರಿ ಹಂತದಲ್ಲಿ ಎಲ್ಲ ವಿಷಯಗಳು ಇಲ್ಲಿ ಅಧ್ಯಯನವಾಗುವಂತಾಗಲಿ, ಅಲ್ಲದೇ ಸ್ವಾಮೀಜಿ ಇಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಜೊತೆಗೆ ಉಚಿತ ನೀಟ್ ಮತ್ತು ಜೆಇಇ ಕೋಚಿಂಗ್ ಕೊಡುತ್ತಾರೆ ಎಂದರು. ಈ ಮಠದ ಅತ್ಯಂತ ಅಂತಕರಣದ ಸ್ಪಂದನೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಡುವೆ ಅಂತಕರಣ ಮರೆತಿದ್ದೇವೆ. ಎಲ್ಲವೂ ಇಲ್ಲಿ ಮಾನವೀಯತೆಯ ಮಾರ್ಕೆಟ್, ಅಂತಕರಣವೇ ಮುಖ್ಯ ಇಂತಹ ಅಂತಕರಣ ಕೊಟ್ಟು ಬೆಳೆಸುತ್ತಿದ್ದೀರಿ. 

ಇಂತಹ ಸಂಸ್ಕಾರದಲ್ಲಿ ಓದಿದವರು ಸಾಧಕರು ಬೆಳೆಯಬೇಕು. ಸಾಧನೆಯ ಮುಂದೆ ಯಶಸ್ಸು ಬಹಳ ಸಣ್ಣದು, ಸಾಧನೆ ಎಂದರೆ ನಮ್ಮ ಶಕ್ತಿ, ಯಶಸ್ಸು ಇತರರಿಗೆ ಸಹಾಯ ಆಗಬೇಕು. ಸಮುದಾಯ, ನಿರ್ಗತಿಕರಿಗೆ ಸಹಾಯಕ ಆಗಬೇಕು. ಅದು ಸಾಧನೆ. ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳುತ್ತಾರೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಈ ಮಾತನ್ನು ಯಾಕೆ ಹೇಳುತ್ತೇನೆ ಎಂದರೆ ಪರಮಪೂಜ್ಯರನ್ನು ನೋಡಿದಾಗ ಇವರು ಸಾಧಕರು, ಅಂತಹ ಸಾಧನೆಯನ್ನು ಪರಮಪೂಜ್ಯರು ಮಾಡುತ್ತಿದ್ದಾರೆ. ಕೊಪ್ಪಳ ವಿದ್ಯಾಕಾಶಿಯಾಗಿ ಇಡೀ ಜಗತಿನಲ್ಲಿ ಬೆಳಗಲಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಗವಿಮಠ ಕೊಪ್ಪಳ ಶ್ರೀಗಳು ಸೇರಿದಂತೆ ನಾಡಿನ ಹಲವಾರು ಪರಮಪೂಜ್ಯರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

Related Articles

Back to top button