Belagavi NewsBelgaum NewsKannada NewsKarnataka NewsLatestPolitics
*ಜೂಜಾಟ ಅಡ್ಡಯ ಮೇಲೆ ಪೊಲೀಸರ ದಾಳಿ: 6 ಜನರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೂಜಾಟ ಅಡ್ಡಯ ಮೇಲೆ ದಾಳಿ ಮಾಡಿರುವ ಮಾರ್ಕೇಟ್ ಪೊಲೀಸರು 6 ಜನ ಜೂಜುಕೋರರನ್ನು ಬಂಧಿಸಿದ್ದಾರೆ.
1ಮೋಶಿನಖಾನ ಮುನಿರಖಾನ ಪಠಾಣ (36) ಶೋಹಬ ಮನ್ಸೂರ ಮಕಾನದಾರ (34), ಹರೂನರಶೀದ ರಾಜೇಸಾಬ ತಿಗಡಿ (46), ಜಾಫರಸಾಧಿಕ ಇಮ್ಮಿಯಾಜ ಘೀವಾಲೆ (31), ಮೊಹಮ್ಮದರಶಿದ ಮಹಮ್ಮದಸಲೀಮ ಬೇಪಾರಿ ಹಾಗೂ ಜಾಫರ ಮೀರಾಸಾಬ ಸನದಿ (43) (ಪರಾರಿ ಆರೋಪಿ) ಆರೋಪಿಗಳು ಸೇರಿ ವೀರಭದ್ರ ನಗರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಇಸ್ಪೀಟ್ ಎಲೆಗಳ ಮೇಲೆ ಹಣ ಹಚ್ಚಿಸಿಕೊಂಡು ಆಟ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ.
ಮಾರ್ಕೇಟ್ ಪೊಲೀಸ್ ಠಾಣೆಯ ಪಿಎಸ್ಐ ವಿಠಲ ಹಾವನ್ನವರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ. ಆರೋಪಿತನಿಂದ ಹಣ ಹಾಗೂ ಇಸ್ಪೀಟ ಎಲೆಗಳನ್ನು ಜಪ್ತಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಮಾರ್ಕೆಟ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ. 92/2026 ಕಲಂ. 87 ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ.




