Belagavi NewsBelgaum NewsKannada NewsKarnataka NewsPolitics

*ಕಣಬರ್ಗಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನ ಬಿಡುಗಡೆ : ಸಂಸದ ಜಗದೀಶ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಹತ್ತಿರದ ಕಣಬರ್ಗಿ ಕೈಗಾರಿಕಾ ಪ್ರದೇಶದಲ್ಲಿನ ರಸ್ತೆಗಳು ಸುಮಾರು ವರ್ಷಗಳಿಂದ ಹಾಳಾಗಿದ್ದು, ಇವುಗಳ ಸುಧಾರಣೆಗಾಗಿ ಮೂರು ಕಾಮಗಾರಿಗಳನ್ನು ಪ್ರಸ್ತಾಪಿಸಿ ಸುಮಾರು ರೂ: 9.10 ಕೋಟಿ ಅನುದಾನ ಒದಗಿಸುವಂತೆ ಕೋರಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಕರ್ನಾಟಕ ಸರಕಾರ ಶ್ರೀ ಎಂ. ಬಿ ಪಾಟೀಲ ಇವರಿಗೆ ದಿನಾಂಕ: 25-10-2025 ರಂದು ಬರೆದ ಪತ್ರಕ್ಕೆ ಮನ್ನಣೆ ನೀಡಿ, ಅವರು ಎರಡು ಕಾಮಗಾರಿಗೆ ಅನುಮೋದನೆ ನೀಡಿ ರೂ: 7.37 ಕೋಟಿ ಬಿಡುಗಡೆ ಮಾಡಿರುವ ಬಗ್ಗೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ.

ಬೆಳಗಾವಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಈ ರಸ್ತೆಗಳು ತುಂಬಾ ಹಾಳಾಗಿದ್ದು, ಇವುಗಳನ್ನು ದುರಸ್ತಿ ಮಾಡಿಸುವಂತೆ ಪ್ರದೇಶದ ಉದ್ಯಮದಾರರು ಮತ್ತು ಸಾರ್ವಜನಿಕರು ಮನವಿಯನ್ನು ಅರ್ಪಿಸಿದ್ದು ಇಲ್ಲಿ ಸ್ಮರಣೀಯ.

ಈ ಹಿನ್ನೆಲೆಯಲ್ಲಿ ಹಾಳಾದ ಮೂರು ರಸ್ತೆ ಕಾಮಗಾರಿಗಳನ್ನು ಪ್ರಸ್ತಾಪಿಸಿ, ಇವುಗಳ ದುರಸ್ತಿಗಾಗಿ ತಗಲುವ ಅಂದಾಜು ರೂ: 9.10 ಕೋಟಿ ಅನುದಾನ ಬಿಡುಗಡೆಗಾಗಿ ಕೋರಲಾಗಿ ಇದರಲ್ಲಿ ಎರಡು ರಸ್ತೆ ಕಾಮಗಾರಿಗಳನ್ನು ಅನುಮೋದಿಸಿ ರೂ: 7.37 ಕೋಟಿ ಬಿಡುಗಡೆ ಗೊಳಿಸಿದ್ದು ಇರುವದು.

ಇವುಗಳಲ್ಲಿ 1) ರೂ: 5.62 ಕೋಟಿಯಲ್ಲಿ ಕಣಬರ್ಗಿ ಕೈಗಾರಿಕಾ ಕ್ಷೇತ್ರದ ಪ್ರದೇಶದಲ್ಲಿನ 5, 6, 7, 8, 9,& 10 ನೇ ಮುಖ್ಯ ರಸ್ತೆ ಹಾಗೂ 1, 2, 3, 7, 9 ನೇ ಅಡ್ಡ ರಸ್ತೆ (ಹಾಳಾಗಿರುವ ರಸ್ತೆಗಳ) ಸುಧಾರಣೆ ಹಾಗೂ ಹೊಸ ಚರಂಡಿ ನಿರ್ಮಾಣ ಮತ್ತು 2) ರೂ: 1.75 ಕೋಟಿ ವೆಚ್ಚದಲ್ಲಿ ಕಣಬರ್ಗಿ ಕೈಗಾರಿಕಾ ಕ್ಷೇತ್ರದ ಪ್ರದೇಶದಲ್ಲಿನ ನಿವೇಶನ ಸಂಖ್ಯೆ 750 ದಿಂದ 660/ಬಿ 4ನೇ ಅಡ್ಡ ರಸ್ತೆ ) 1193 ರಿಂದ 1178 ( 8 ನೇ ಅಡ್ಡ ರಸ್ತೆ) 1210 ದಿಂದ 1217 ಹಾಗೂ 1119 ದಿಂದ 1115 ರಲ್ಲಿ ಹಾಳಾಗಿರುವ ರಸ್ತೆಗಳ ಸುಧಾರಣೆ ಹಾಗೂ ಹೊಸ ಚರಂಡಿಗಳ ನಿರ್ಮಾಣ ಸೇರಿವೆ ಎಂದು ಜಗದೀಶ ಶೆಟ್ಟರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button