Kannada NewsLatestNationalPolitics

*ಇದು ಧರ್ಮೋಪದೇಶವಲ್ಲ, ಪ್ರಧಾನಿ ಮೋದಿ ಆಡಳಿತದ ವೈಫಲ್ಯಗಳು: ರಾಹುಲ್ ಗಾಂಧಿ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ದೇಶದ ಜನರು ತ್ಯಾಗಕ್ಕೆ ಸಿದ್ಧರಾಗಿ ಎಂದು ಕರೆ ನೀಡಿರುವ ಪ್ರಧಾನಿ ಮೋದಿ ಇಂಧನ ಉಳಿತಾಯದ ಜೊತೆಗೆ ಅಡುಗೆ ಎಣ್ನೆ ಬಳಕೆ ಕಡಿಮೆ ಮಾಡಿ, ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸಿ, ಒಂದು ವರ್ಷಗಳ ಕಾಲ ಚಿನ್ನಾಭರಣ ಖರೀದಿಸಬೇಡಿ, ವರ್ಕ್ ಫ್ರಂ ಹೋಂ ಗೆ ಆದ್ಯತೆ ನೀಡಿ ಎಂದು ಸಂದೇಶ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಈ ಸಂದೇಶ ಭಾರಿ ಚರ್ಚೆಗೆ ಕಾರಣವಾಗಿದೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಪ್ರಧಾನಿ ಮೋದಿ ಹೇಳಿಕೆಗೆ ಇದು ಧರ್ಮೋಪದೇಶವಲ್ಲ, ಮೋದಿ ಆಡಲಿತದ ವೈಫಲ್ಯಗಳು ಎಂದು ಕಿಡಿಕಾರಿದ್ದಾರೆ.

ಎಕ್ಸ್​ ಪೋಸ್ಟ್​ನಲ್ಲಿ ಬರೆದುಕೊಂಡಿರುವ ರಾಹುಲ್​ ಗಾಂಧಿ, ಮೋದಿಯನ್ನು ರಾಜಿ ಮಾಡಿಕೊಂಡ ಪ್ರಧಾನಿ ಎಂದು ಟೀಕಿಸಿದ್ದಾರೆ. ದೇಶವನ್ನು ನಡೆಸುವುದು ಇನ್ಮುಂದೆ ಪ್ರಧಾನಿ ಕೈಯಲ್ಲಿಲ್ಲ. ಸರ್ಕಾರವು ಸ್ವತಃ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಧಾನಿ ಮೋದಿ ತಮ್ಮ ಜವಾಬ್ದಾರಿಯನ್ನು ಸಾರ್ವಜನಿಕರಿಗೆ ವರ್ಗಾಯಿಸಿದ್ದಾರೆ. ಅವರು ದೇಶವನ್ನು ಎಂತಹ ಸ್ಥಿತಿಗೆ ತಂದಿದ್ದಾರೆ ಎಂದರೆ ಸಾರ್ವಜನಿಕರಿಗೆ ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಹೇಳವು ಸ್ಥಿತಿಗೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿ ಪ್ರಧಾನಿ ಮೋದಿಯವರು ತಮ್ಮ ಜವಾಬ್ದಾರಿಯನ್ನು ಜನರ ಮೇಲೆ ಹಾಕುತ್ತಿದ್ದಾರೆ. ಇದರಿಂದ ಅವರು ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದು, ದೇಶವನ್ನು ನಡೆಸುವುದು ಇನ್ನು ಮುಂದೆ ರಾಜಿ ಮಾಡಿಕೊಂಡ ಪ್ರಧಾನಿಯ ವ್ಯಾಪ್ತಿಯಲ್ಲಿಲ್ಲ ಎಂದು ಟೀಕಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕಾರ್ಯಕ್ರಮದಲ್ಲಿ ಜನರಿಗೆ ಪೆಟ್ರೋಲ್​ ಮತ್ತು ಡಿಸೇಲ್​ ಬಳಕೆ ತಗ್ಗಿಸಲು ಸಂಚಾರ ತ್ಯಾಗ ಮಾಡುವಂತೆ, ಚಿನ್ನ ಖರೀದಿಸಬೇಡಿ. ವಿದೇಶ ಪ್ರಯಾಣ ಬೇಡ. ರಸಗೊಬ್ಬರ ಮತ್ತು ಅಡುಗೆ ಎಣ್ಣೆಯನ್ನು ಕಡಿಮೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ ಎಂದು ಕರೆ ನೀಡಿದ್ದರು. ಇವು ಇವು ಧರ್ಮೋಪದೇಶಗಳಲ್ಲ. ಇವು ಸರ್ಕಾರದ 12 ವರ್ಷದ ವೈಫಲ್ಯದ ಸಾಕ್ಷಿಗಳು ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Home add -Advt


Related Articles

Back to top button