
ಪ್ರಗತಿವಾಹಿನಿ ಸುದ್ದಿ: ಇರಾನ್, ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದ ನಡುವೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿರುವ ಮಹತ್ವದ ಸಂದೇಶ ಭಾರಿ ಚರ್ಚೆಗೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ತೈಲಗಳ ಅಭಾವ ಸೃಷ್ಟಿಯಾಗಲಿದೆಯೇ? ಎಂಬ ಆತಂಕ ಎದುರಾಗಿದೆ.
ಹೈದರಾಬಾದ್ ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿರುವ ಸಂದೇಶ ಇಂತದ್ದೊಂದು ಅನುಮಾನಕ್ಕೆ ಕಾರಣವಾಗಿದೆ. ಜಗತ್ತು ಬಿಕ್ಕಟ್ಟಿನಲ್ಲಿದ್ದು, ದೇಶದ ಹಿತಕ್ಕಾಗಿ ತ್ಯಾಗಗಳನ್ನು ಮಾಡಲು ಸಿದ್ಧರಾಗಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ, ವಿದೇಶಿ ವಿನಿಮಯವನ್ನು ಉಳಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ನಾಗರಿಕರು ಮುಂದಿನ ಒಂದು ವರ್ಷದವರೆಗೆ ಚಿನ್ನಾಭರಣಗಳನ್ನು ಖರೀದಿಸಬೇಡಿ. ಅಲ್ಲದೆ, ವಿದೇಶಿ ಪ್ರಯಾಣವನ್ನು ತಪ್ಪಿಸಿ, ಸಾಧ್ಯವಾದಷ್ಟು ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡಿ. ಎಲೆಖ್ರಿಕ್ ವಾಹನಗಳ ಬಳಕೆ ಮಾಡಿ. ವಿದ್ಯುತ್ ವಾಹನಗಳ ಬಳಕೆಗೆ ಉತ್ತೇಜನ ನೀಡಿ. ವರ್ಕ್ ಫ್ರಂ ಹೋಂಗೆ ಆದ್ಯತೆ ನೀಡಿ. ಕೋವಿಡ್ ನಂತಹ ಸಂದರ್ಭದಲ್ಲಿ ವರ್ಕ ಫ್ರಂ ಹೋಂ, ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದೆವು. ಅದೇ ರೀತಿ ಈಗಲೂ ವರ್ಕ್ ಫ್ರಂ ಹೋಂ ಮಾಡಿ. ಮನೆಯಿಂದಲೇ ಕೆಲಸ ಮಾಡುವ, ಆನ್ಲೈನ್ ಸಭೆಗಳನ್ನು ನಡೆಸುವ ಮೂಲಕ ವೆಚ್ಚಗಳನ್ನು ಕಡಿಮೆಗೊಳಿಸಿ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮಿತವಾಗಿ ಬಳಸುವ ಮೂಲಕ ದೇಶದ ವಿದೇಶಿ ವಿನಿಮಯವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮೋದಿ ಒತ್ತಿ ಹೇಳಿದ್ದಾರೆ. ಅಡುಗೆ ಎಣ್ಣೆ ಬಳಕೆಯ ತಗ್ಗಿಸಿ. ಅಡುಗೆ ಎಣ್ಣೆ ಕಡುಮೆ ಬಳಸುವುದು ಆರೋಗ್ಯಕ್ಕೆ ಒಳ್ಳೆಯದು.
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ನೈಸರ್ಗಿಕ ಕೃಷಿಗೆ ಒತ್ತು ನೀಡಿ. ನೈಸರ್ಗಿಕ ಕೃಷಿಗೆ ಒತ್ತು ನೀಡುವುದರಿಂದ ಭೂಮಿ ಫಲವತ್ತತೆ ಹೆಚ್ಚಲಿದೆ. ವಿದೇಶಿ ಉತ್ಪನ್ನಗಳನ್ನು ಹೆಚ್ಚು ಬಳಸದೇ ಸ್ವದೇಶಿ ವಸ್ತುಗಳನ್ನು ಖರೀದಿಸಿ. ದೇಶದ ಆರ್ಥಿಕ ಸ್ಥಿರತೆಗೆ ಈ ಕ್ರಮಗಳು ಸಹಕಾರಿ ಆಗಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.



